
ಹನೂರು :- ತಾಲೂಕಿನ ರಾಮಪುರ ಪೊಲೀಸ್ ಠಾಣಾ, ಸರಹದ್ದಿನ ಎಲೆಚಿ ಕೆರೆ ಗ್ರಾಮದ ನಿವಾಸಿ ಯುವಕ ಶಿವರುದ್ರ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಸೋಮವಾರ ಬೆಳಗ್ಗೆ ತಿಳಿದು ಬಂದಿದೆ.
ಅನುಮಾನಾಸ್ಪದವಾಗಿ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಘಟನೆ ಸ್ಥಳಕ್ಕೆ ರಾಮಪುರ ಪೊಲೀಸರು ಭೇಟಿ ನೀಡಿದ್ದು ಈ ಬಗ್ಗೆ ಪರಿಶೀಲಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣದ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
