ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯ ಬಂಧನ…!!

ಹನೂರು :- ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ಬೆಳೆದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಮಪುರ ಪೊಲೀಸ್ ಠಾಣೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ತಾಲೂಕಿನ ದೊಮ್ಮನಗದ್ದೆ ಗ್ರಾಮದ ನಾಗರಾಜು (45) ಅಲಿಯಾಸ್ ರಾಜ ಬಿನ್ ಲೇಟ್ ಸಿದ್ದುನಾಯ್ಕ ಬಂಧಿತ ಆರೋಪಿಯಾಗಿದ್ದಾನೆ. ಈತ ಜಮೀನಿನಲ್ಲಿ ಬೆಳೆದಿದ್ದ 20 ಗಾಂಜಾ ಗಿಡಗಳನ್ನು (20 ಕೆ.ಜಿ 500 ಗ್ರಾಂ ತೂಕ, ಅಂದಾಜು ಮೌಲ್ಯ 5,25,000/-ರೂ) ವಶಪಡಿಸಿಕೊಂಡಿದ್ದಾರೆ.

ದೊಮ್ಮನಗದ್ದೆ ಗ್ರಾಮದ ನಾಗರಾಜು ಎಂಬ ವ್ಯಕ್ತಿಯು ಉಡುತೊರೆ ಜಲಾಶಯದ ಹಳ್ಳದ ಪಕ್ಕದಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದಾನೆ. ಎಂಬ ಖಚಿತ ಮಾಹಿತಿ ಮೇರೆಗೆ ರಾಮಪುರ ಸಿಪಿಐ ಚಿಕ್ಕರಾಜು ಶೆಟ್ಟಿ, ಸಬ್ ಇನ್ಸ್ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ನಾಗರಾಜು ಕಾನೂನು ಬಾಹಿರವಾಗಿ ಪೋಷಿಸಿ ಬೆಳೆಸಿದ್ದ 20 ಗಾಂಜಾ ಗಿಡಗಳನ್ನು (20 ಕೆ.ಜಿ 500 ಗ್ರಾಂ ತೂಕ, ಅಂದಾಜು ಮೌಲ್ಯ 5,25,000/-ರೂ) ಅಮಾನತ್ತು ಪಡಿಸಿಕೊಂಡು ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆ, ಮಾರಾಟ ಮಾಡುತ್ತಿರುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧೀಕ್ಷಕರು ಕವಿತ ಬಿ.ಟಿ ರವರು ನಿರ್ದೇಶನದ ಮೇರೆಗೆ ಮತ್ತು ಅಪರ ಪೊಲೀಸ್ ಅಧೀಕ್ಷಕರು ಶಶಿಧರ್ ಮತ್ತು ಕೊಳ್ಳೇಗಾಲ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಧರ್ಮೇಂದ್ರ ರವರ ಮಾರ್ಗದರ್ಶನದಲ್ಲಿ ರಾಮಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಿಕ್ಕರಾಜ್‌ ಶೆಟ್ಟಿ ರವರಿಗೆ ದೊರೆತ ಮಾಹಿತಿ ಮೇರೆಗೆ ಕಾರಪ್ರವೃತ್ತರಾಗಿ ಕೊಳ್ಳೇಗಾಲ ಉಪವಿಭಾಗದ ಪೊಲೀಸ್ ಡಿವೈಎಸ್‌ಪಿ ರವರ ಅನುಮತಿ ಆದೇಶ ಪಡೆದು ತಮ್ಮ ಸಿಬ್ಬಂದಿಗಳೊಡನೆ ದಾಳಿ ನಡೆಸಿದ್ದಾರೆ. ಆರೋಪಿತ ನಾಗರಾಜು ಎಂಬ ವ್ಯಕ್ತಿಯನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ.

ಈ ದಾಳಿಯಲ್ಲಿ ರಾಮಾಪುರ ಪೊಲೀಸ್ ಠಾಣೆ ಸಿಪಿಐ ಚಿಕ್ಕರಾಜ್‌ ಶೆಟ್ಟಿ, ಇನ್ಸ್‌ಪೆಕ್ಟರ್, ಲೋಕೇಶ್.ಎಸ್ ಪಿಎಸ್‌ಐ (ಅ), ಮಹೇಂದ್ರಸಿ, ರಘು, ರಾಜು, ಅಮಗೊಂಡ ಬಿರಾದಾರ್, ಲಿಯಾಖತ್ ಅಲಿಖಾನ್, ರಾಮಪ್ಪ ಹಕ್ಕಲ್ ರವರ ತಂಡದ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ಡಾ. ಕವಿತಾ, ಬಿ.ಟಿ, ಐಪಿಎಸ್ ರವರು ಪ್ರಶಂಸಿಸಿದ್ದಾರೆ.

Related Articles

Leave a Reply

Your email address will not be published. Required fields are marked *