ಕಾಡಾನೆ ದಾಳಿಗೆ ಫಸಲು ನಾಶ…!

ಕಾಡಾನೆ ದಾಳಿಗೆ ಫಸಲು ನಾಶ…!

ಹನೂರು :- ಹದಿನೈದು ದಿನಗಳಿಂದ ರೈತರಜಮೀನುಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿರೈತರು ಬೆಳೆದ ಬೆಳೆಗಳನ್ನು ನಾಶ ಪಡಿಸುತ್ತಿದ್ದರೂ ಇತ್ತಅರಣ್ಯಾಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಬೂಡಿಕ್ಕಿ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿ ರೈತ ರಾದ ಮಾದಯ್ಯ ಹಾಗೂ ಶಿವಮೂರ್ತಿ ಎಂಬವರ ಜಮೀನುಗಳಲ್ಲಿ ಫಸಲುಗಳನ್ನು ನಾಶ ಮಾಡುತ್ತಿದೆ. ರೈತ ಮಾದಯ್ಯ ಮಾತನಾಡಿ, ಕಳೆದ 15 ದಿನಗಳಿಂದ ರೈತರ ಜಮೀನುಗಳಲ್ಲಿ ನಿರಂತರವಾಗಿ ರಾತ್ರಿಯ ವೇಳೆ ಕಾಡಾನೆ ಜಮೀನು ಗಳಿಗೆ ನುಗ್ಗಿ ರೈತರು ಬೆಳೆದ ಮೆಕ್ಕೆಜೋಳ ರಾಗಿ ಸೇರಿದಂತೆ ಇತರ ಫಸ ಲನ್ನು ನಾಶ ಮಾಡುತ್ತಿವೆ. ಸರ್ವೇ ನಂ 19, 31ರಲ್ಲಿ 1.50 ಎಕರೆ, ಸರ್ವೇ ನಂ 14ರಲ್ಲಿ 1.50ಎಕರೆ ಸೇರಿದಂತೆ ಇತರ ರೈತರ ಜಮೀನು ಗಳಲ್ಲೂ ಸಹ ಹಾನಿ ಮಾಡಿದೆ ಎಂದರು. ನಿರಂತರ ವಾಗಿ ಕಾಡನೆ ಗಳು ಜಮೀನು ಗಳಿಗೆ ಲಗ್ಗೆ ಇಟ್ಟು ಫಸಲನ್ನು ನಾಶ ಪಡಿಸುತ್ತಿರುವ ಬಗ್ಗೆ ಹತ್ತು ಹಲವು ಬಾರಿ ಅಧಿಕಾರಿ ಗಳಿಗೆ ಮಾಹಿತಿ ನೀಡಿದರು ಸಹ ಕಾಡಾನೆಯನ್ನು ಓಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ರೈತರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Related Articles

Leave a Reply

Your email address will not be published. Required fields are marked *