
ಹನೂರು :- ಪಟ್ಟಣದ 11ನೇ ವಾರ್ಡ್‌ನಲ್ಲಿ 5 ದಿನದ ಹಿಂದೆ ಮೃತರಾದ ಕೃಷ್ಣಗೌಡರ ದೇಹವನ್ನು ಶುಕ್ರವಾರ ತಹಸೀಲ್ದಾರ್ ಕೆ.ಎನ್. ಚೈತ್ರಾ ಅವರ ಸಮ್ಮುಖದಲ್ಲಿ ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ, ವೈದ್ಯರ ವರದಿ ಪ್ರಕಾರ ದೇಹವನ್ನು ಪುನಃ ಸಮಾಧಿ ಸ್ಥಳದಲ್ಲಿ ಹೂಳಯಲಾಗಿದೆ. ಕೃಷ್ಣಗೌಡ ಅವರು ನವೆಂಬರ್ 15 ರಂದು ರಾತ್ರಿ ಹನೂರು ಸಮೀಪದ ಎಲ್ಲೇಮಾಳ ಗ್ರೀನ್ ಕಾರ್ಪೆಟ್ ರೆಸಾರ್ಟ್‌ನಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋದಿದ್ದು, ರಾತ್ರಿ 10:30ರ ವೇಳೆಗೆ ಹನೂರಿಗೆ ಮರಳಿದ್ದರು. ಭಾನುವಾರ ಬೆಳಗ್ಗೆ ತಮ್ಮ ಮನೆ ಸಮೀಪದ ರಸ್ತೆಯಲ್ಲಿ ಮೃತಸ್ಥಿತಿಯಲ್ಲಿ ಕಂಡುಬಂದರು. ಆರಂಭದಲ್ಲಿ ಹೃದಯಾಘಾತದಿಂದ ಮೃತರಾದಿರ ಬಹುದು ಎಂದು ತಿಳಿದು ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆದರೆ, ಘಟನೆ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಸಹೋದರ ರಾಜುಗೌಡ ಕುಟುಂಬಕ್ಕೆ ನ್ಯಾಯ ಒದಗಿಸಲು ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನಲೆ ಕೃಷ್ಣಗೌಡರ ದೇಹವನ್ನು ಶುಕ್ರವಾರ ತಹಸೀಲ್ದಾರ್ ಕೆ.ಎನ್. ಚೈತ್ರಾ ಅವರ ಸಮ್ಮುಖದಲ್ಲಿ ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪ್ರಕರಣ ಸಂಬಂಧ ಹನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
