
ಜೇವರ್ಗಿ : ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಲ್ಲಹಂಗರಗಾ ಗ್ರಾಮದ ವಿಜಯಲಕ್ಷ್ಮಿ ಶರಣಗೌಡ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು.ಹಿಂದಿನ ಅಧ್ಯಕ್ಷ ಶರಣಮ್ಮ ನಿಜಲಿಂಗಯ್ಯ ಮಾವನೂರ ರಾಜೀನಾಮೆಯಿಂದ ತೆರವಾಗಿದ್ದ, ಸ್ಥಾನಕ್ಕೆ ನಡೆದ ಚುನಾವಣೆಗೆ ವಿಜಯಲಕ್ಷ್ಮಿ ಶರಣಗೌಡ ಕಲ್ಲಹಂಗರಗಾ ಇವರು ಮಾತ್ರ ನಾಮ ಪತ್ರ ಸಲ್ಲಿಸಿದ್ದರು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ತಹಶೀಲ್ದಾರ್ ಮಲ್ಲಣ್ಣ ಯಲ್ಲಗೊಡ ಅವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿ ವಿಜಯಲಕ್ಷ್ಮಿ ಶರಣಗೌಡ ಅವರಿಗೆ ಅಧಿಕಾರ ವಹಿಸಿಕೊಟ್ಟರು.ಮಾಜಿ ಅಧ್ಯಕ್ಷರಾದ ಶರಣಮ್ಮ ನಿಜಲಿಂಗಯ್ಯ ಉಪಾಧ್ಯಕ್ಷ ಶಶಿಕಲಾ ನಾಗಪ್ಪ ತಳವಾರ ಸೇರಿದಂತೆ 14 ಮಂದಿ ಸದಸ್ಯರು ಹಾಜರಿದ್ದು. ಸದಸ್ಯರ ಎಲ್ಲಾ ಸದಸ್ಯರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.ನೂತನ ಅಧ್ಯಕ್ಷರು ನಿರೀಕ್ಷೆಯಂತೆ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಗ್ರಾಮದ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭೀವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.ಚುನಾವಣಾಧಿಕಾರಿ ಮಲ್ಲಣ ಯಲ್ಲಗೋಡ ಅವರು ಸದಸ್ಯರು ಮತ್ತು ಅಧ್ಯಕ್ಷರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ಧಿ ಸಾಧಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬಹುದು. ಅಭಿವೃದ್ಧಿ ವಿಚಾರಗಳಿಗೆ ರಾಜಕೀಯವನ್ನು ಬೆರೆಸಬಾರದು ಎಂದು ಸಲಹೆ ನೀಡಿದರು. ಮತದಾನಕ್ಕೆ ಭಾಗಿಯಾದಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶರಣಮ್ಮ ನಿಜಲಿಂಗಯ್ಯ ಮಾವನೂರ, ಬಸವರಾಜ ಹಣಮಂತ, ರಾಜಶೇಖರ ಬಸಣ್ಣ, ನಾಗೇಂದ್ರ ಯಲ್ಲಮ್ಮ ಅಡಿವೆಪ್ಪ, ಶರಣಪ್ಪ ವರವಿ, ಸ್ವಾತಿ ಜೈಭೀಮ, ಭಾಗಮ್ಮ ಬಸವರಾಜ ಮಾವನೂರ, ಸಿದ್ದು ಶರಣಪ್ಪ ಮಾವನೂರ, ದೇವರಾಜ್ ವಚಗೊಂಡ, ದೇವಕ್ಕಿ ದೊರೆ ಜನಿವಾರ, ನಾಗಮ್ಮ ಶಂಕರಲಿಂಗ ಜನಿವಾರ, ಈ ಸಂದರ್ಭದಲ್ಲಿ ಹಲವಾರು ಹಾಜರಿದ್ದರು.
ವರದಿ:ಲಕ್ಷ್ಮಣ ಎಸ್ ಪವಾರ
