
ಹನೂರು :- ತಾಲೂಕಿನ ಪ್ರಸಿದ್ಧ ಸ್ಥಳವಾದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು ಒಂದು ವರ್ಷದಲ್ಲಿ ಸುಮಾರು 4. ಲಕ್ಷದ 49.ಸಾವಿರ 105 ರೂ. ನಗದು ಹಣ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ಈ ದಿನ ಮಂಗಳವಾರ ಸುರೇಖ ಉಪ ತಹಶಿಲ್ದಾರರು ಶಿವಕುಮಾರ್ ರಾಜ ನೀರಿಕ್ಷಕರು ಗ್ರಾಮ ಆಡಳಿತ ಅಧಿಕಾರಿಗಳು ಕಾರ್ತಿಕ್, ವಿನೋದ್ ಸುರೇಶ,ಮಹದೇವ ಪ್ರಸಾದ್, ರಾಜುಶಿವಕುಮಾರಸ್ವಾಮಿ, ಅನಿಲ್, ವಾಸುದೇವಆರಕ್ಷಕ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿ ರವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
