ವನ್ಯ ಪ್ರಾಣಿ ದಾಳಿಗೆ ಸಾಕು ಪ್ರಾಣಿ ಬಲಿ…!

ವನ್ಯ ಪ್ರಾಣಿ ದಾಳಿಗೆ ಸಾಕು ಪ್ರಾಣಿ ಬಲಿ…!

ಹನೂರು :- ವನ್ಯಪ್ರಾಣಿ ದಾಳಿಗೆ ಹಸುಯೊಂದು ಬಲಿಯಾಗಿರುವ ಘಟನೆ ಕಳ್ಳಿದೊಡ್ಡಿ ಸಮೀಪದಲ್ಲಿ ಜರುಗಿದ್ದು ಶುಕ್ರವಾರತಡವಾಗಿ ಬೆಳಕಿಗೆ ಬಂದಿದೆ

ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳಿದೊಡ್ಡಿ ಗ್ರಾಮದ ಅಂಕಪ್ಪ ಬಿನ್ ಸಣ್ಣನಾಯಕಸೇರಿದ ಹಸು ಎಂದು ಗುರುತಿಸಲಾಗಿದೆಎಂದಿನಂತೆ ಶನಿವಾರ ಕಳ್ಳಿದೊಡ್ಡಿ ಗ್ರಾಮದ ಜಮೀನಿನಲ್ಲಿ ಮೇವುಮೇಯಲು ಹಸು ಬಿಟ್ಟಿದ್ದರುಅಂಕಪ್ಪ ಸಾಕಿದ ನಾಟಿ ಹಸಿವಿನ ಹೊರಿಯನ್ನು ಸಂಜೆ ವೇಳೆ ಚಿರತೆ ದಾಳಿ ಮಾಡಿಕೊಂದು ಹಾಕಿದೆ ಎಂದು ರೈತ ಆರೋಪಿಸಿದ್ದಾರೆದಾಳಿಗೆ ಒಳಗಾದ ಹೋರಿಯ ಕತ್ತಿನ ಭಾಗ ಹಿಂಭಾಗದಲ್ಲಿಗಾಯಗೊಂಡಿದ್ದು ರಕ್ತ ಕಲೆ ಹೊಂದಿದೆಇದರ ಬೆಲೆ ಸುಮಾರು 60 ಸಾವಿರಕ್ಕೆ ಬಾಳುತ್ತಿತ್ತು ಇದೀಗ ಹೋರಿಇಲ್ಲವಾಗಿದೆ ಎಂದು ರೈತ ತಮ್ಮ ಅಳಲುನ್ನು ತೋಡಿಕೊಂಡಿದ್ದುಇದಕ್ಕೆ ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆಚಿರತೆವನ್ಯಪ್ರಾಣಿಗಳ ದಾಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ

 ಘಟನೆ ಸಂಬಂಧ ಹನೂರು ಕಾವೇರಿ ವನ್ಯಜೀವಿ ಧಾಮ ವಲಯ ಕಳ್ಳಿದೊಡ್ಡಿ ಬೀಟ್ ಅರಣ್ಯ ಇಲಾಖೆ ಸಿಬ್ಬಂದಿಮಲ್ಲಿಕಾರ್ಜುನವಿವೇಕ್ ಅವರು ಭೇಟಿ ನೀಡಿ ಪರಿಶೀಲನೆ ನೆಡೆಸಿದರುಬಳಿಕ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿಎಂದು ಸಿಬ್ಬಂದಿಗಳು ನಾಟಿದನದ ಮಾಲೀಕರಿಗೆ ತಿಳಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ

Related Articles

Leave a Reply

Your email address will not be published. Required fields are marked *