153 ದಿನಗಳ ರೈತ ಸಂಘಟನೆ ವತಿಯಿಂದ ನಡೆಯುತ್ತಿದ್ದ ಅಹೋ ರಾತ್ರಿ ಧರಣಿ ಕೊನೆಗೂ ಅಂತ್ಯ….!

153 ದಿನಗಳ ರೈತ ಸಂಘಟನೆ ವತಿಯಿಂದ ನಡೆಯುತ್ತಿದ್ದ ಅಹೋ ರಾತ್ರಿ ಧರಣಿ ಕೊನೆಗೂ ಅಂತ್ಯ….!

ಹನೂರು :- ದಂಟಳ್ಳಿ ಮಾರ್ಗ ಏತ ನೀರಾವರಿ ಯೋಜನೆ ಕಲ್ಪಿಸುವಂತೆ ಕಳೆದ 153 ದಿನಗಳಿಂದ ನಡೆಯುತ್ತಿದ್ದ ರೈತರಅಹೋ ರಾತ್ರಿ ಧರಣಿ ಪ್ರತಿಭಟನೆಯನ್ನು ಶಾಸಕ ಎಂಆರ್ ಮಂಜುನಾಥ್ ರವರು ರೈತರ ಮನವೊಲಿಸಿದ್ದ ಹಿನ್ನೆಲೆಶನಿವಾರ ಪ್ರತಿಭಟನೆಗೆ ಅಂತ್ಯ ನಾಂಧಿ ಹಾಡಲಾಯಿತ್ತು.

ತಾಲೂಕಿನ ವಡಕೆಹಳ್ಳ ಗ್ರಾಮದಲ್ಲಿ ದಂಟಳ್ಳಿ ಏತ ನೀರಾವರಿ ಯೋಜನೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯರೈತ ಸಂಘಟನೆ ವತಿಯಿಂದ ನಡೆಯುತ್ತಿದ್ದ ಅಹೋ ರಾತ್ರಿ ಧರಣಿ ಕೊನೆಗೂ ಅಂತ್ಯಗೊಂಡಿದೆ.

ಬಳಿಕ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್ ಹನೂರು ವಿಧಾನ ಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದುಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಜೊತೆಗೆ ರಸ್ತೆಗಳುಸೇತುವೆಗಳುಹಾಗೂ ನೀರಾವರಿ ಯೋಜನೆಗೆ ಸಾಕಷ್ಟು ಅಭಿವೃದ್ಧಿಯಾಗುತ್ತಿದೆಅಲ್ಲದೇ ಕುಡಿಯುವ ನೀರು ಯೋಜನೆ ಸಂಬಂಧಪಟ್ಟಂತೆ ಈಗಾಗಲೇ ರಾಮನ ಗುಡ್ಡ ಕೆರೆಗೆ ನೀರು ತುಂಬಿದ್ದು ಮುಂದುವರೆದ ಭಾಗವಾಗಿ ಅನೇಕ ಹಳ್ಳಿಗಳಿಗೆಹಳ್ಳದಲ್ಲಿ ನೀರು ಹರಿದು ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆಕಳೆದ ಕೆಲವು ದಿನಗಳ ಹಿಂದೆ ಸುಮಾರು 490 ಕೋಟಿರೂ ವೆಚ್ಚದಲ್ಲಿ ಉಡುತೊರೆ ಹಳ್ಳ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಲು ಮುಖ್ಯ ಮಂತ್ರಿಗಳುಅನುಮೋದನೆ ನೀಡಿದ್ದಾರೆ

ಹಾಗಾಗಿ  ಜಲಾಶಯಕ್ಕೆ ಕಾವೇರಿ ನೀರು ಬಂದರೆ ಖಂಡಿತ ಮಾರ್ಟಳ್ಳಿರಾಮಾಪುರಕೌದಳ್ಳಿ ಶೆಟ್ಟಳ್ಳಿ ಕುರಟ್ಟಿಹೊಸೂರು ಭಾಗದ ಜನರಿಗೆ ಹಾಗೂ ರೈತಾಪಿ ವರ್ಗಕ್ಕೆ ಅನುಕೂಲ ಆಗಲಿದೆಈಗಾಗಲೇ ಮಾರ್ಟಳ್ಳಿ ಭಾಗದಲ್ಲಿಇರುವಂತಹ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಸಾಕಷ್ಟು ಯೋಜನೆ ಸಿದ್ದಪಡಿಸಿದ್ದು ಖಂಡಿತ ನಿಮಗೆ ನೀರಾವರಿಸೌಲಭ್ಯ ಒದಗಿಸಿಯೇ ತಿರುತ್ತೇನೆ ಎಂದರು.

ಇದೆ ಸಮಯದಲ್ಲಿ ವಡಕ್ಕೆ ಹಳ್ಳ ಫಾಥರ್ ಡಾ ಸಿಲುವೈನಾಥ್,ಬಿದರಲ್ಲಿ ಫಾಥರ್,ಸಿಸ್ಟರ್ಸೇಲ್ವಮೇರಿ,ಸೈಲೆಂದ್ರ,ಸಯ್ಯದ್ ಉಲ್ಲಾಬಸವರಾಜುಬೆಟ್ಟಣ್ಣ,ಮಾರ್ತಾಳ್ಳಿ ಘಟಕದ ಅಧ್ಯಕ್ಷ ರಾದ ಅರ್ಪುದರಾಜು,ರಾಜಶೇಖರ್,ಹಾಗೂ ಇನ್ನಿತರ ರೈತ ಮುಖಂಡರುಗಳು ಇದ್ದರು..

Related Articles

Leave a Reply

Your email address will not be published. Required fields are marked *