ನಾಗಮಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿಗೆ : ಬಾಲಕ ಸಾವು….

ನಾಗಮಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿಗೆ : ಬಾಲಕ ಸಾವು….


ಹನೂರು :- ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ನಾಗಮಲೆಗೆ ತೆರಳುತ್ತಿದ್ದ ಬಾಲಕ ಚಿರತೆ ದಾಳಿಗೆ ಬಲಿಯಾಗಿರುವ ದುರ್ಘಟನೆಭಾನುವಾರ ಬೆಳಿಗ್ಗೆ ನಡೆದಿರುವುದು ತಿಳಿದು ಬಂದಿದೆ.

ಬೆಂಗಳೂರು ಮೂಲದ ಹರ್ಷಿತ (10)ಮೃತ ಬಾಲಕ.

ಘಟನೆ ವಿವರತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮಾದಪ್ಪನ ದೇವಾಲಯಕ್ಕೆ ಆಗಮಿಸಿದ್ದ ಬಾಲಕಸಂಬಂಧಿಕರೊಡನೆ ಭಾನುವಾರ ಬೆಳಿಗ್ಗೆ ನಾಗಮಲೆಗೆ ದೇವರ ದರ್ಶನಕ್ಕೆ ತೆರಳುವಾಗ ಬಾಲಕನ ಮೇಲೆ ಎರಗಿರುವಚಿರತೆ ದಾಳಿ ನಡೆಸಿ ಎಳೆದ್ಯೋಯ್ದಿದೆಸುಮಾರು ಅರ್ಥ ತಾಸಿನ ಬಳಿಕ ಬಾಲಕನ ಮೃತ ದೇಹ ಪತ್ತೆಯಾಗಿದ್ದುಬಾಲಕನ ಕತ್ತು ಸೇರಿದಂತೆ ಅಂಗಾಂಗಳು ರಕ್ತ ಸಿಕ್ತವಾಗಿವೆ ಎಂದು ಸ್ಥಳೀಯರಿಂದ ತಿಳಿದು ಬಂದಿದೆವಿಷಯ ತಿಳಿದಅರಣ್ಯ ಇಲಾಖೆ ವಾಚರಗಳು ಸ್ಥಳದಲ್ಲಿ ಇದ್ದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆಬಾಲಕನ ಕುಟುಂಬಸ್ಥರಆಕ್ರಂದನ ಮುಗಿಲು ಮುಟ್ಟುವಂತಾಗಿದೆ.

ಸಾವಿಗೆ ಅರಣ್ಯ ಇಲಾಖೆಯವರ ನಿರ್ಲಕ್ಷ್ಯ ಕಾರಣಅರಣ್ಯ ಇಲಾಖೆಯವರು ಭಕ್ತರು ನಾಗಮಲೆಗೆ ತೆರಳಲು ಬೆಳಿಗ್ಗೆ 7 ಗಂಟೆ ಬಳಿಕ ಟಿಕೆಟ್ ನೀಡುತ್ತಿದ್ದರು ಆದರೆ ಭಾನುವಾರ ಆರು ಗಂಟೆಗೆ ಟಿಕೆಟ್ ನೀಡಿರುವುದರಿಂದ  ದುರ್ಘಟನೆಸಂಭವಿಸಿದೆಭಕ್ತಾಧಿಗಳ ರಕ್ಷಣೆಗೆ ಓರ್ವ ಅರಣ್ಯ ಸಿಬ್ಬಂದಿ ಕೂಡ ಜೊತೆಯಲ್ಲಿ ಹೋಗಬೇಕು ಎಂಬ ನಿಯಮಉಲ್ಲಂಘಿಸಿದ್ದಾರೆ ಸಾವಿಗೆ ಅರಣ್ಯ ಇಲಾಖೆಯವರೆ ಕಾರಣ ಎಂದು ನಮ್ಮ ಕನ್ನಡಿಗರ ವಿಜಯ ಸೇನೆ ರಾಜ್ಯಸಂಘಟನಾ ಕಾರ್ಯದರ್ಶಿ ಪೊನ್ನಾಚಿ ಸ್ನೇಹಜೀವಿ ರಾಜು ಆರೋಪಿಸಿದ್ದಾರೆ.

ಮುಂದುವರೆದ ಚಿರತೆ ದಾಳಿಮಲೆ ಮಹದೇಶ್ವರ ಬೆಟ್ಟ ಕಾನನದಲ್ಲಿ ಚಿರತೆ ದಾಳಿ ಮುಂದುವರೆದಿದ್ದು  ಹಿಂದೆಮಂಡ್ಯ ಮೂಲದ ಪಾದಯಾತ್ರಿ ಯುವಕ ಚಿರತೆ ದಾಳಿಗೆ ಬಲಿಯಾಗಿದ್ದ ಘಟನೆ ಮಾಸುವ ಮುನ್ನವೆಕುಟುಂಬಸ್ಥರ ಜೊತೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತುಅದೃಷ್ಟವಶಾತ್ತರಚಿದ ಗಾಯಗಳಾಗಿ ಬಾಲಕ ಬದುಕುಳಿದಿದ್ದಇದಾದ ಬಳಿಕ ಭಾನುವಾರ ಮುಂಜಾನೆ ಬಾಲಕ ಚಿರತೆ ದಾಳಿಗೆಬಲಿಯಾಗಿರುವುದು ಭಕ್ತರು ಹಾಗೂ ಸಾರ್ವಜನಿಕರಲ್ಲಿ ಆತಂಕ ತಂದಿದೆನರ ಭಕ್ಷಕ ಚಿರತೆಗಳನ್ನು ಅರಣ್ಯಇಲಾಖೆಯವರು ಸೆರೆ ಹಿಡಿಯದಿದ್ದರೆ ಮುಂದೆ ಇಂತಹ ಘಟನೆಗಳು ಮರುಕಳುಹಿಸುತ್ತಲೆ ಇರುತ್ತವೆ.

Related Articles

Leave a Reply

Your email address will not be published. Required fields are marked *