
ಹನೂರು :- ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದನೇ ತರಗತಿ ಇಂಗ್ಲಿಷ್ ಮಾಧ್ಯಮ ಕೊಠಡಿ ಉದ್ಘಾಟಿಸಿ ನಂತರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅಕ್ಷರ ಅಭ್ಯಾಸ ಮಾಡಿಸಿದರು.ನಂತರ ಮಾತನಾಡಿದ ಅವರು, ಸ್ಪರ್ಧಾ ತ್ಮಕ ಯುಗದಲ್ಲಿ ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮ ಮಕ್ಕಳಿಗೆ ಬೇಕಾಗಿರುವುದರಿಂದ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿರುವುದು ಶ್ಲಾಘ ನೀಯ ವಿಚಾರ. ಜೊತೆಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮವೇದಿಕೆಯಾಗಿದೆ. ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆದು ಉತ್ತಮ ಫಲಿತಾಂಶ ನೀಡುವುದರ ಮೂ ಲಕ ಹೆಸರು ತರಬೇಕು. ಶೈಕ್ಷಣಿಕ ವಲಯದ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರು ಸಹ ಶ್ರಮಿಸಬೇಕು ಎಂದರು.ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಮುಖವಾಗಿ ಬೇಕಾಗಿರುವುದರಿಂದ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂ ಭಿಸಿರುವುದು ಸರ್ಕಾರಿ ಶಾಲೆಗಳ ವಿದ್ಯಾ ರ್ಥಿಗಳಿಗೆ ಅನುಕೂಲದಾಯಕವಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್. ಅಭಿವ್ಯಕ್ತ ಪಡಿಸಿದರು.ಇದೇ ಸಂದರ್ಭದಲ್ಲಿ ಬಿ ಇ ಓ ಗುರುಲಿಂಗಯ್ಯ, ಗ್ರಾ. ಪ ಅಧ್ಯಕ್ಷ ಮುತ್ತುರಾಜು, ಎಸ್ ಡಿ ಎಂ ಸಿ ಅಧ್ಯಕ್ಷ ಮಲ್ಲೇಶ್,ಬಸಪ್ಪನದೋಡ್ಡಿ ಶಾಲೆಯ ಮುಖ್ಯ ಶಿಕ್ಷಕ ವೀರಪ್ಪ,ಮಹಾದೇವಪ್ರಸಾದ್, ನಾಗರಾಜು, ಹೊನ್ನಪ್ಪ, ಚಿನ್ನವೆಂಕಟ, ವಿಜಯ್ ಕುಮಾರ್,ಗುರು, ರಫೀಕ್,ಎಸ್ ಆರ್ ಮಹದೇವ್, ಶಿಕ್ಷಕರಾದ ದೊರೆಸ್ವಾಮಿ,ಸೋಮಣ್ಣ, ಪುಟ್ಟರಾಮು, ಸುಧಾಮಣಿ,ಮುತ್ತಮ್ಮ ಸೇರಿದಂತೆ ಮುಖಂಡರು ವಿದ್ಯಾರ್ಥಿಗಳು ಹಾಜರಿದ್ದರು.
