
ಚಾಮರಾಜನಗರ :- ಗೋಬಿ ಮತ್ತು ಐಸ್ ಕ್ರೀಮ್ ತಿನ್ನಲು ಟ್ಯೂಷನ್ ಗೆ ಚಕ್ಕರ್ ಹಾಕಿದ್ದಬಾಲಕ ಪೋಷಕರಿಗೆ ನಿಜಾಂಶ ಮುಚ್ಚಿಡಲು ತನ್ನನ್ನು ಕಿಡ್ನಾಪ್ ಮಾಡಲಾಗಿತ್ತು ಎಂದು ಕಥೆ ಹೆಣೆದಿದ್ದು ಈತನ ಮಾತನ್ನು ನಂಬಿದ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗ ನಡೆದಿದೆ.
ಘಟನೆ ವಿವರ : ಚಾಮರಾಜನಗರದ ಬಂಜಾರ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಪ್ರತಿದಿನ ಸಂಜೆ 4:45ಕ್ಕೆ ಶಾಲೆ ಮುಗಿಸಿ ಕಲ್ಪವೃಕ್ಷ ನವೋದಯ ಕೋಚಿಂಗ್ ಸೆಂಟರ್ ಗೆ ಟ್ಯೂಷನ್‌ಗೆ ಹೋಗುತ್ತಿದ್ದ ಆತ ಹೇಳಿದ ಕಥೆ ಹೀಗಿದೆ ನಿನ್ನೆ ಸಂಜೆ ನನ್ನನ್ನು ಯಾರೋ ಮೂರು ಜನ ಹುಡುಗರು ಕರೆದು ತಲೆ ನೋವು ಮನೆಗೆ ಹೋಗುತ್ತೇನೆ ಅಂತ ನಿಮ್ಮ ಮೇಡಂ ಗೆ ಟ್ಯೂಷನ್ ಗೆ ರಜೆ ಹಾಕಿ ಬಾ ಅಂತ ಹೇಳಿದ್ದರು ಹೇಳಿ ಬೇರೆ ಫೋನ್ ನಂಬರಿಗೆ ಕಾಲ್ ಮಾಡಿ ಮಾತನಾಡು ನಿಮ್ಮ ತಾಯಿ ಜೊತೆ ಮಾತನಾಡುವ ಹಾಗೆ ಮಾತನಾಡು ನಂತರ ನೀನು ವಾಪಸ್ ಬರಬೇಕು ಬರದಿದ್ದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಹೆದರಿಸಿದ್ದರು ಆ ಹುಡುಗರ ಮಾತನ್ನು ಕೇಳಿ ಕೆಳಗೆ ಬಂದೆ. ನಂತರ ನನ್ನನ್ನು ಒಂದು ಕಾರಿನಲ್ಲಿ ಕೂರಿಸಿಕೊಂಡು ಬಾಯಿಗೆ ಪ್ಲಾಸ್ಟರ್ ಹಾಕಿ ಮುಖಕ್ಕೆ ಬಟ್ಟೆಯನ್ನು ಹಾಕಿ ಕಣ್ಣು ಮಾತ್ರ ಕಾಣಿಸುವಂತೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ ಯಾವುದೋ ಒಂದು ಗೋಡನ್ ನಲ್ಲಿ ಹೋಗಿ ಕಾರನ್ನು ನಿಲ್ಲಿಸಿದ್ದಾರೆ ನಂತರ ಅರ್ಧ ಗಂಟೆಗಳ ಕಾಲ ಅಲ್ಲೇ ಕೂರಿಸಿ ಕೊಂಡಿದ್ದಾರೆ ಮತ್ತೆ ಅದೇ ಕಾರಿನಲ್ಲಿ ವಾಪಸ್ ಕರ್ನಾಟಕ ಬ್ಯಾಂಕ್ ಹತ್ತಿರ ಕರೆದುಕೊಂಡು ಬಂದು ನಿಲ್ಲಿಸಿ ನನ್ನನ್ನು ಕೆಳಗೆ ಇಳಿಸಿ ಬೇರೆಕಡೆ ಹೋಗಬಾರದೆಂದು ಹೇಳಿ ಆ ಮೂರು ಹುಡುಗರು ಕಾರಿನಲ್ಲಿ ವಾಪಸ್ ಹೋಗಿದ್ದಾರೆ ನಂತರ ಬೈಕಿನಲ್ಲಿ ಬಂದು ಇ ಐವತ್ತು ರೂಪಾಯಿಯನ್ನು ಕೊಟ್ಟು ಗೋಬಿ ಮತ್ತು ಐಸ್ ಕ್ರೀಮ್ ತಿನ್ನಲು ಹೇಳಿದ್ದಾರೆ. ತಿನ್ನದಿದ್ದರೆ ನಿನ್ನನ್ನು ಸಾಯಿಸುತ್ತೇವೆ ಎಂದು ಹೆದರಿಸಿದ್ದರು. ಇದು ಆ ಬಾಲಕ ಹೇಳಿದ್ದ ಕಥೆ.
ಕಾರಣ ಇಷ್ಟೇ: ಈ ಬಾಲಕ ಐಸ್ ಕ್ರೀಮ್ ಮತ್ತು ಗೋಬಿಯನ್ನು ತಿನ್ನುತ್ತಿದ್ದ ಸಮಯದಲ್ಲಿ ಈತನ ಪಕ್ಕದ ಮನೆ ಮಹಿಳೆ ನೋಡಿದ್ದಾರೆ. ಎಲ್ಲಿ ತಾನು ಟ್ಯೂಷನ್‌ಗೆ ಚೆಕ್ಕರ್ ಹಾಕಿ ತಿನ್ನುತ್ತಾ ಇರುವುದನ್ನು ತನ್ನ ಪೋಷಕರಿಗೆ ತಿಳಿಸಿ ಬಿಡುತ್ತಾರೋ ಎಂದು ಹೆದರಿ ಕಂಡು ಈತ ಆ ಮಹಿಳೆ ಹಿಂದೆ ಓಡಿ ಹೋಗಿದ್ದಾನೆ ನಂತರ ಸುಳ್ಳು ಕಥೆ ಸೃಷ್ಟಿಸಿ ಅವರಿಗೆ ಹೇಳಿದ್ದಾನೆ. ಬಳಿಕ ತನ್ಮ ತಂದೆಗು ಮಾಹಿತಿ ನೀಡಿದ್ದಾನೆ. ವಿಷಯ ತಿಳಿದ ಪೋಷಕರು ಬೆಚ್ಚಿಬಿದ್ದು ಪಟ್ಟಣ ಪೊಲೀಸ್ ಠಾಣೆಗೆ ಮಗನನ್ನು ಕರೆದುಕೊಂಡು ಬಂದು ದೂರು ನೀಡಿದ್ದಾರೆ.ಬಾಲಕ ಹೇಳಿದ ಕಥೆ ಕೇಳಿ ಪೊಲೀಸರು ಸಹ ಬೆಚ್ಚಿಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಬಾಲಕ ಹೇಳಿದ್ದ ಎಲ್ಲ ಕಡೆ ಸಿ ಸಿ ಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಎಲ್ಲಿಯು ಯಾವುದೇ ಸುಳಿವು ದೊರೆಯಲ್ಲಿಲ್ಲ. ಬಳಿಕ ಬಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಹೇಳಿದ್ದೆಲ್ಲಾ ಕಟ್ಟು ಕಥೆ ಎಂಬುದು ಬೆಳಕಿಗೆ ಬಂದಿದೆ
