
ಹನೂರು :- ಜಾನುವಾರುಗಳಿಗೆ ಚರ್ಮಗಂಟು ರೋಗದ ಲಸಿಕೆಯನ್ನು ಜಾನುವಾರುಗಳಿಗೆ ಖಾಯಿಲೆ ಕಾಣಿಸಿಕೊಂಡಿರುವ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳಿಗೆ ರೋಗ ಪ್ರತಿಬಂಧಕ ಹಾಕಲಾಗಿದ್ದು, ರೋಗದ ಬಗ್ಗೆ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ತಿಳಿಸಿದ್ದಾರೆ.14 ಕುರಟ್ಟಿ ಹೊಸೂರು ಗ್ರಾಮದ ಸುಮಾರು ಜಾನುವಾರುಗಳಲ್ಲಿ ಚರ್ಮಗಂಟು ಕಾಯಿಲೆ ಕಾಣಿಸಿಕೊಂಡಿದ್ದು, ಇದುವರೆಗೂ 6 ಕರುಗಳು ಮೃತಪಟ್ಟಿವೆ. ಉಳಿದ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸೆಪ್ಟೆಂಬರ್ 12 ಹಾಗೂ 16 ರಂದು ಪಶುಪಾಲನಾ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಡಾ. ಶಿವಣ್ಣ, ಚಾಮರಾಜನಗರ ಜಿಲ್ಲೆಯ ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಬಿ. ಮಂಜುನಾಥ್, ಹನೂರು ತಾಲ್ಲೂಕು ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ರೋಗೋದ್ರೇಕದ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ.ರೋಗದ ಪ್ರತಿಬಂಧಕ ಲಸಿಕೆಯನ್ನು ಕುರಟ್ಟಿ ಹೊಸೂರು ಗ್ರಾಮದ 870 ಜಾನುವಾರುಗಳಿಗೆ ಹಾಕಲಾಗಿದೆ. ರೋಗೋದ್ರೇಕವನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕುರಟ್ಟಿ ಹೊಸೂರಿನ ಸುತ್ತಮುತ್ತಲ 10 ಕಿ.ಮೀ ವ್ಯಾಪ್ತಿಯ ದಂಟಳ್ಳಿ, ಶೆಟ್ಟಹಳ್ಳಿ, ಚೆನ್ನೂರು, ಭದ್ರಯ್ಯನಹಳ್ಳಿ, ಎ.ಹೊಸಹಳ್ಳಿ, ಅರಬಗೆರೆ, ಎಲ್.ಪಿ.ಎಸ್ ಕ್ಯಾಂಪ್, ಮುನಿಶೆಟ್ಟಿದೊಡ್ಡಿ, ವಿ.ಎಸ್. ದೊಡ್ಡಿ ಗ್ರಾಮದ ಒಟ್ಟು 3799 ಜಾನುವಾರುಗಳಿಗೆ ಲಸಿಕೆಗಳನ್ನು ಹಾಕಲಾಗಿದೆ.ಜಿಲ್ಲೆಯಲ್ಲಿ ಈಗಾಗಲೇ 2025-26ನೇ ಸಾಲಿನ ಏಪ್ರಿಲ್ ಮಾಹೆಯಲ್ಲಿ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದ (ಎಲ್.ಹೆಚ್.ಡಿ.ಸಿ.ಪಿ) 4ನೇ ಸುತ್ತಿನಲ್ಲಿ 1.92,897 ಜಾನುವಾರುಗಳಿಗೆ ಲಸಿಕೆಯನ್ನು ಪ್ರಸ್ತುತ ಚರ್ಮಗಂಟು ರೋಗ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ 2 ಲಕ್ಷ ಲಸಿಕೆಯನ್ನು ಎಲ್ಲಾ 5 ತಾಲ್ಲೂಕುಗಳಿಗೆ ವಿತರಿಸಲಾಗಿದ್ದು ಜಾನುವಾರುಗಳಿಗೆ ಚುಚ್ಚುಮದ್ದುಗಳನ್ನು ರೋಗದ ವಿರುದ್ಧ ಲಸಿಕೆ ನೀಡಲಾಗುತ್ತಿದೆ.ಕೊಟ್ಟಿಗೆಯ ಪರಿಸರವನ್ನು ಸ್ವಚ್ಚವಾಗಿ ಕಾಪಾಡಿಕೊಳ್ಳಲು ಮತ್ತು ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆ ನೊಣಗಳಿಂದ ಹಾಗೂ ಹರಡುವ ರೋಗವಾಗಿರುವುದರಿಂದ ಕೊಟ್ಟಿಗೆ ಸ್ವಚ್ಛತೆ ಹಾಗೂ ಕಾಲಕಾಲಕ್ಕೆ ಲಸಿಕೆ ಹಾಕಿಸುವುದರಿಂದ ರೋಗ ಹರಡದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಿಬ್ಬಂದಿ ವರ್ಗದವರು ಚರ್ಮಗಂಟು ರೋಗದ ಲಸಿಕೆಯನ್ನು ಜಾನುವಾರುಗಳಿಗೆ ಹಾಕಲು ಮನೆ ಬಾಗಿಲಿಗೆ ಬಂದಾಗ ರೈತರು ನಿರಾಕರಿಸದೆ ತಮ್ಮ ಜಾನುವಾರುಗಳಿಗೆ ಸೂಕ್ತ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿರುವ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ರೋಗದ ಬಗ್ಗೆ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.
