ರೈತರನ ಜಮೀನಿಗೆ ಕಾಡಾನೆ ಲಗ್ಗೆ ಫಸಲು ನಾಶ…!

ರೈತರನ ಜಮೀನಿಗೆ ಕಾಡಾನೆ ಲಗ್ಗೆ ಫಸಲು ನಾಶ…!

ಹನೂರು :- ತಾಲೂಕಿನ ಹೂಗ್ಯ0 ವಲಯ ಅರಣ್ಯಕ್ಕೆ ಸೇರಿದ ಗಾಜನೂರಿನ ಗ್ರಾಮದರೈತ ಗೋವಿಂದ ಎಂಬುವರ ಜಮೀನಿಗೆ ರಾತ್ರಿ ಸಮಯದಲ್ಲಿ ಜಮೀನಿಗೆ ನುಗ್ಗಿದ ಆನೆಗಳು ಬಾಳೆ ಮತ್ತು ಜೋಳದ ಫಸಲನ್ನು ನಾಶ ಮಾಡಿದೆ, ಸಾಲ ಸೂಲ ಮಾಡಿ ಹಾಕಿರುವ ಬೆಳೆಯನ್ನು ಆನೆಗಳು ನಾಶ ಮಾಡಿದ್ದರಿಂದ ರೈತನಾದ ನನಗೆ ಬಹಳ ಅನ್ಯಾಯ ಆಗಿದೆ ಇದರಿಂದ ದಿಕ್ಕು ತೋಚದಂತಾಗಿದೆ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಪರಿಹಾರ ನೀಡಬೇಕು ಎಂದು ಹೇಳಿದರು ಈ ಗ್ರಾಮದ ವಲಯ ಅರಣ್ಯಕ್ಕೆ ಯಾರು ಅರಣ್ಯ ಅಧಿಕಾರಿಗಳು ಇಲ್ಲ ಶೀಘ್ರದಲ್ಲಿ ಅರಣ್ಯ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರುತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಒತ್ತಾಯಿಸುತ್ತಿದ್ದಾರು, ನಮ್ಮ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಕಾಡುಪ್ರಾಣಿಗಳಿಂದ ರೈತರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ, ಕಾಡಂಚಿನ ಪ್ರದೇಶದಲ್ಲಿರುವ ರೈತರು ಜಮೀನಿನಲ್ಲಿ ಹಾಕಿರುವ ಬೆಳೆಯನ್ನು ಕಾಡು ಪ್ರಾಣಿಗಳಿಂದ ನಾಶವಾಗಿತ್ತಿರುವುದು ಹಲವಾರು ವರ್ಷಗಳಿಂದ ಇರುವ ಸಮಸ್ಯೆ ಆದ್ದರಿಂದ ಅಧಿಕಾರಿಗಳು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ರೈತರಿಗೆ ಆಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಮ್ಮ ಅರಣ್ಯ ಇಲಾಖೆ ಅಧಿಕಾರಿಗಳ ಕಚ್ಚೆದೆಯ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಲಯ ಪ್ರೊಫೆಷನರಿ ಹಾಗೂ ಹೂಗ್ಯಂ ವಲಯ ಸಂರಕ್ಷಣಾಧಿಕಾರಿ ಉಮಾಪತಿಯವರು ಮಾತನಾಡಿ ರೈತ ಗೋವಿಂದ ಅವರ ಜಮೀನಿಗೆ ರಾತ್ರಿ ಆನೆಗಳು ದಾಳಿ ಮಾಡಿ ಬೆಳೆ ನಾಶ ವಾಗಿದೆ, ನಮ್ಮ ಅಧಿಕಾರಿಗಳನ್ನು ರೈತರ ಜಮೀನಿಗೆ ಕಳಿಸಿ, ಪರಿಶೀಲಿಸಿ ರೈತರಿಂದ ಸೂಕ್ತ ದಾಖಲೆಗಳನ್ನು ಪಡೆದು ಪರಿಹಾರ ನೀಡಲಾಗುತ್ತದೆ ಎಂದರು

Related Articles

Leave a Reply

Your email address will not be published. Required fields are marked *