ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಅಲ್ಲೆ : ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಆಕ್ರೋಶ…!

ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಅಲ್ಲೆ  : ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಆಕ್ರೋಶ…!

ಹನೂರು :- ತಾಲೂಕಿನ ಕೌದಳ್ಳಿ ಮಲೆ ಮಾದೇಶ್ವರ ವನ್ಯಧಾಮ ಅರಣ್ಯ ಪ್ರದೇಶಕ್ಕೆ ವ್ಯಾಪ್ತಿಯಲ್ಲಿ ಬರುವ ಕಡಂಬುರು ಗ್ರಾಮದ ರೈತ ಮಹದೇವ್ ತನ್ನ ಜಾನುವಾರು ಮೇಕೆಗಳನ್ನು ಎಲಚಿ ಕೆರೆ ಅರಣ್ಯ ಪ್ರದೇಶದಲ್ಲಿ ಮೇಸುತಿದ್ದಾಗ ಐವರು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಂದ ನಡೆದಿರುವ ಹಲ್ಲೇ ಕಿರುಕುಳ. ಆರೋಪ…

ಘಟನೆಯ ವಿವರ : ಎಲಚಿ ಕೆರೆ ಅರಣ್ಯ ಪ್ರದೇಶದಲ್ಲಿ ಕಡಂಬುರು ಗ್ರಾಮದ ರೈತ ಮಹದೇವ್ 3,7, 2025 ರಂದು ಜಾನುವಾರುಗಳು ಮತ್ತು ತಮ್ಮ ಮೇಕೆಗಳನ್ನು ಮೇಯಲು ಬಿಟ್ಟಿದ್ದಾಗ ವಲಯ ವ್ಯಾಪ್ತಿಗೆ ಬರುವ ಅರಣ್ಯಾಧಿಕಾರಿ ಹಾಗೂ ನಾಲ್ವರು ಸಿಬ್ಬಂದಿಗಳಿಂದ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಬಂದಂತ ಅಧಿಕಾರಿಯ ಸಿಬ್ಬಂದಿಗಳು ರೈತನ ಮೇಲೆ ಜಾನುವಾರುಗಳನ್ನು ಹೊಡೆದು ಓಡಿಸಿ ನಂತರ ರೈತನನ್ನು ಐದು ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿ ಕಪಾಲಕ್ಕೆ ಬೆನ್ನಿಗೆ ಸಿಕ್ಕ ಕಡೆಯಲ್ಲ ಹಲ್ಲೇ ನಡಸಿ ಕೌದಳ್ಳಿ ಅರಣ್ಯ ಅಧಿಕಾರಿಗಳ ಗೆಸ್ಟ್ ಹೌಸ್ ನಲ್ಲಿ ಒಂದು ಕೊಠಡಿಯಲ್ಲಿ ಕೂಡಿಹಾಕಿ ಬಟ್ಟೆ ಬಿಚ್ಚಿ ಮನಬಂದಂತೆ ಹಲ್ಲೇ ನಡೆಸಿ ಈತನನ್ನು ಬಲವಂತವಾಗಿ ಚಿರತೆ ಸಾವಿಗೆ ಕಾರಣ ನಾನೇ ಎಂದು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಲ್ಲದೆ 15 ಸಾವಿರ ರೂ ಹಣ ನೀಡಿದರೆ ಬಿಡುತ್ತೇವೆ ಎಂದು ಗೆಸ್ಟ್ ಹೌಸ್ ನಲ್ಲಿ ಮನ ಬಂದಂತೆ ರೈತನ ಮೇಲೆ ಹಲ್ಲೆ ನಡೆಸಿ ಒಂದು ದಿನ ಕೊಟ್ಟಡಿಯಲ್ಲಿ ಕೂಡಿಹಾಕಿ ನಂತರ ಬಿಡುಗಡೆಗೊಳಿಸಿದ ಅರಣ್ಯ ಅಧಿಕಾರಿಗಳು ದುಂಡಾವರ್ತಿಯಿಂದ ರೈತನಿಗೆ ವಿಚಾರ ತಿಳಿದರೆ ನಿನ್ನನ್ನು ಬಿಡುವುದಿಲ್ಲ ಎಂದು ದರ್ಪದಿಂದ ಆತನಿಗೆ ಬೆದರಿಕೆ ಒಡ್ಡಿ ಕಳಿಸಿರುವ ಘಟನೆ ಜರುಗಿದೆ….

ಚಿರತೆ ಕಾಲು ಕಡಿದು ಉಗುರಿಗೆ ಕತ್ತರಿ ದುಷ್ಕೃತ್ಯದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಪ್ಪಿತಸ್ಥರ ಮೇಲೆ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜುಲೈ ಒಂದರಂದು ಕಚೇರಿಗೆ ದೂರಿನ ಬಂದ ಪತ್ರ ಬಂದ ಹಿನ್ನೆಲೆ ಹಿರಿಯ ಅಧಿಕಾರಿಗಳಿಗೆ ತನಿಖೆ ನಡೆಸಿ ತಪ್ಪಿತಸ್ಥ ಕೌದಳ್ಳಿ ವಲಯ ಅರಣ್ಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಆದೇಶ ನೀಡಿದ್ದರು 3,7, 2025 ರಂದು ತಾಲೂಕಿನ ಚಿಂಚಳ್ಳಿ ಗ್ರಾಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಉಸ್ತುವಾರಿ ಸಚಿವ ವೆಂಕಟೇಶ್ ತಾಲೂಕಿಗೆ ಬಂದ ದಿನವೇ ಅರಣ್ಯ ಅಧಿಕಾರಿಗಳಿಂದ ಮುಗ್ಧ ರೈತನ ಮೇಲೆ ಹಲ್ಲೆ ಮತ್ತು ದರ್ಪದಿಂದ ಬೆದರಿಕೆ ಹೊಂದಿರುವ ಘಟನೆ ಜರುಗಿದೆ…

ರಾಮಪುರ ಪೊಲೀಸ್ ಠಾಣೆಗೆ ದೂರು : ಅರಣ್ಯಾಧಿಕಾರಿಗಳು ಮುಗ್ಧ ರೈತನ ಮೇಲೆ ಮನಬಂದಂತೆ ಇಡೀ ರಾತ್ರಿ ತಿಳಿಸಿರುವ ಬಗ್ಗೆ ರೈತ ಮುಖಂಡ ಮಹದೇವ್ ಅವರಿಂದ ರಾಮಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ….ಅರಣ್ಯಾಧಿಕಾರಿಗಳ ತಪ್ಪು ಮುಚ್ಚಲು ರೈತನ ಮೇಲೆ ದರ್ಪ : ಕೌ ದಳ್ಳಿ ವಲಯ ಅರಣ್ಯ ಪ್ರದೇಶದಲ್ಲಿ ಚಿರತೆಯ ಕಾಲು ಕಡಿದು ಉಗುರಿಗೆ ಕತ್ತರಿ ಯಾಕೆ ದುಷ್ಕೃತ್ಯದ ಬಗ್ಗೆ ಸೂಕ್ತ ತನಿಖೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಮುಗ್ಧ ರೈತನ ಮೇಲೆ ದರ್ಪ ತೋರಿಸುವ ಬಗ್ಗೆ ಸಂಘ-ಸಂಸ್ಥೆಗಳು ಹಿರಿಯ ಅಧಿಕಾರಿಗಳನ್ನು ಈ ಘಟನೆಯ ಬಗ್ಗೆ ಕುಲಂಕುಶವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ….

ಅರಣ್ಯ ಪ್ರದೇಶದ 5 ಕಿಲೋಮೀಟರ್ ರಸ್ತೆಯಲ್ಲಿ ಹಲ್ಲೆ ನಡೆಸಿ 15,000 ಹಣಕ್ಕೆ ಬೇಡಿಕೆ ಇಟ್ಟರು ನಾನು ಯಾವುದೇ ತಪ್ಪು ಮಾಡಿಲ್ಲ ನನಗೆ ಯಾಕೆ ಸುಳ್ಳು ಹೇಳಲು ಹೇಳುತ್ತೀರಾ ಎಂದು ಹೇಳಿದ್ದಕ್ಕೆ ಜಾನುವಾರು ಮತ್ತು ಮೇಕೆಗಳನ್ನು ಓಡಿಸಿ ನನ್ನನ್ನು ಕೌದಳ್ಳಿ ಅರಣ್ಯ ಇಲಾಖೆ ಗೆಸ್ಟ್ ಹೌಸ್ ಗೆ ಕರದೈದು ಇದೇ ರಾತ್ರಿ ಕೂಡಿಹಾಕಿ ಕೊಠಡಿಯಲ್ಲಿ ಮನಬಂದಂತೆ ತಿಳಿಸಿ ಯಾರಿಗಾದರೂ ತಿಳಿಸಿದರೆ ನಿನಗೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು..

ಮಹದೇವ ಕಡಂಬುರು ಅರಣ್ಯಾಧಿಕಾರಿಗಳಿಂದ ಹಲ್ಲೆಗೆ ಒಳಗಾದ ರೈತ….

ಅರಣ್ಯ ಅಧಿಕಾರಿಗಳು ತಾವು ಮಾಡಿರುವ ತಪ್ಪನ್ನು ಮುಚ್ಚಿಹಾಕಲು ರೈತರ ಮೇಲೆ ದೌರ್ಜನ್ಯ ನಡೆಸಿ ಗೆಸ್ಟ್ ಹೌಸ್ ನಲ್ಲಿ ಬಟ್ಟೆ ಬಿಚ್ಚಿ ಮನೆಬಂದಂತೆ ಅಲ್ಲೇ ನಡೆಸಿರುವ ಕೌದ್ದಳ್ಳಿ ವಲಯ ಅರಣ್ಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮೇಲಾಧಿಕಾರಿಗಳು ಕ್ರಮವಹಿಸಬೇಕು ಈ ಬಗ್ಗೆ ರೈತನಿಂದ ರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ತಿಳಿಸಲಾಗಿದೆ ಇದರ ಬಗ್ಗೆ ರೈತ ಸಂಘಟನೆ ವತಿಯಿಂದ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ…

ಹೊನ್ನೂರ್ ಪ್ರಕಾಶ್ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ…

Related Articles

Leave a Reply

Your email address will not be published. Required fields are marked *