
:ಕಲಬುರಗಿ ಜಿಲ್ಲೆ: ಜೇವರ್ಗಿ ತಾಲ್ಲೂಕಿನ: ಬೆಳ್ಳಂಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ, ಓಂ ಬೇಕರಿ ಅಂಗಂಡಿಯೊಂದು ಅಗ್ನಿನಿ ಅವಘಡ ಸಂಭವಿಸಿದ ಘಟನೆ, ಜೇವರ್ಗಿಯ ಪಟ್ಟಣದ ಬಿಜಾಪುರ ಸರ್ಕಲ್ ಬಸವೇಶ್ವರ್ ವೃತ್ತದ್ದ ಹತ್ತಿರ ನಡೆದಿದೆ.ಬೆಂಳ್ಳಂಬೆಳ್ಳಿಗೆ ಹೊತ್ತಲ್ಲಿ 6 ಗಂಟೆ ಸಮಯದಲ್ಲಿ ಬೇಕರಿ ಅಂಗಡಿಯಲ್ಲಿ ವಿದ್ಯುತ್ ಶಾಟ್ ಸರ್ಕ್ಯೂಟ್ ದಿಂದ ಬೆಂಕಿ ಅವಘಡ ಸಂಭವಿಸಿದೆ. ಇದರಿಂದ ಬೇಕರಿ ಅಂಗಡಿಯಲ್ಲಿ ಇದ್ದ ದಿನನಿತ್ಯ ಬಳಸುವ ಸಾಮಗ್ರಿ ವಸ್ತುಗಳು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಬೆಂಕಿಯಿಂದಾಗಿ ಭಾರೀ ಮಟ್ಟದಲ್ಲಿ ಹೊಗೆ ಸುತ್ತಲಿನ ಪ್ರದೇಶವನ್ನು ಆವರಿಸಿಕೊಂಡಿತ್ತು. ಇದರಿಂದ ಸ್ಥಳೀಯರು ಕೆಲ ಕಾಲ ಆತಂಕ ವ್ಯಕ್ತಪಡಿಸಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ, ಇನ್ನೂ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ಕೈಗೊಂಡು ಬೆಂಕಿ ನಿಂದಿಸಿದ್ದಾರೆ, ಬೆಂಕಿಯಿಂದ ವಸ್ತುಗಳೆಲ್ಲ ಸುಟ್ಟ ಕರಕಾಲಾಗಿವೆ ಎಂಬ ಮಾಹಿತಿ ಈ ಪ್ರಕರಣವನ್ನು ಸ್ಥಳೀಯ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವರದಿ: ಲಕ್ಷ್ಮಣ ಎಸ್ ಪವಾರ ಜೇವರ್ಗಿ
