
ಜೇವರ್ಗಿ: ತಾಲ್ಲೂಕಿನ: ಮಾವನೂರ ಗ್ರಾಮದಲ್ಲಿ ಇಲ್ಲಿ ಯುವಕರು ವಿಶೇಷವಾಗಿ ಮೊಹರಂ ಆಚರಿಸಿದ್ದಾರೆ, ಹಿರಿಯರು ಸೇರಿದಂತೆ ನಮ್ಮ ಮುಸ್ಲಿಂ ಭಾಂದವರ ಜೊತೆ ಹೆಜ್ಜೆ ಹಾಕಿ ಭಾವೈಕ್ಯತೆದ ಸಂಪ್ರದಾಯ ಆಚರಣೆ ಮಾಡಿದ್ದು,ನಮ್ಮ ಕರ್ನಾಟಕದ ಹಲವು ಭಾಗಗಳಲ್ಲಿ ಮೊಹರಂ ಎನ್ನುವುದು ಮುಸ್ಲಿಂ ಹಬ್ಬವಾಗಿಲ್ಲ, ಬದಲಾಗಿ ಈ ಹಬ್ಬವನ್ನು ಹಿಂದೂ ಹಾಗೂ ಮುಸ್ಲಿಂಮರು ಸೇರಿ ಭಾವೈಕ್ಯದಿಂದ ಆಚರಿಸುತ್ತಿದ್ದಾರೆ. ಜಾತಿ, ಧರ್ಮದ ಸಂಕೋಲೆಯನ್ನು ಮೀರಿ ಅಸ್ಮಿತೆ ಸೃಷ್ಟಿಸಿಕೊಂಡ ಮುಸ್ಲಿಮರ ಪವಿತ್ರ ಹಬ್ಬದ ಇತಿಹಾಸ ಹಾಗೂ ಆಚರಣೆ ವಾಗಿದೆ, ಜಾತಿ, ಧರ್ಮಗಳ ಸಂಕೋಲೆ ಮೀರಿ ಅಸ್ಮಿತೆ ಸೃಷ್ಟಿಸಿಕೊಂಡ ಹಬ್ಬ; ಮೊಹರಂ, ಇಂದು ಕೊನೆಯ ದಿನವಾದ ಮೊಹರಂ ಹಬ್ಬವನ್ನು ಈ ಹಳ್ಳಿಯಲ್ಲಿ ವಿಶೇಷ ರೀತಿಯ ಆಚರಣೆ ಮಾಡಿದ್ದಾರೆ, ಆಚರಣೆ ಯಾವ ರೀತಿ ಎಂದರೆ’ ಮೊಹರಂನಲ್ಲಿ ಶೋಕಗೀತೆಯ ರಚನೆ, ಹಾಡಿಕೆ, ಕುಣಿತ, ಯುವಕರು ಯುವತಿಯರ ನಾನಾ ರೀತಿಯ ಬಟ್ಟೆ ಹಾಕಿಕೊಂಡು ಹಲಗೆ ಸೌಂಡ್ಗೆ ಹೆಜ್ಜೆ ಹಾಕುತ್ತಾ ಕುಣಿಯುವ ಯುವಕರ ಉತ್ಸಾಹ ನೋಡಿದರೆ’ ನೋಡುಗರಿಗೆ ಮನಮೆಚ್ಚುವಂತ ಅಹಸ್ಯ ಸಂಭ್ರಮವಾಗಿತ್ತು, ಇದರ ಫಲವಾಗಿ ಗಾಯನದ ಹೆಜ್ಜೆಕುಣಿತ ಹಾಕುತ್ತಾ. ಜಾತಿ,ಧರ್ಮದ ಸಂಕೋಲೆ ಮಿರಿ ಭಾವೈಕ್ಯತೆ ತೋರಿದ, ಈ ಗ್ರಾಮಸ್ಥರು,
ವರದಿ:ಲಕ್ಷ್ಮಣ ಎಸ್ ಪವಾರ ಜೇವರ್ಗಿ
