
ಹನೂರು :-ತಾಲೂಕಿನ ಬಹುತೇಕ ರೈತರು ಮಳೆಯಾಶ್ರಿತ ಬೆಳೆಗಳನ್ನೂ ನಂಬಿ ಬದುಕುವ ರೈತರು ತಾಲೂಕಿನ ವಿವಿಧಡೆ ಬಿತ್ತನೆ ಮಾಡಲಾಗಿರುವ ಸಜ್ಜೆ ಹಾಗೂ ಮುಸ್ಕಿನ ಜೋಳ ಇತರ ಫಸಲು ಮಳೆ ಇಲ್ಲದೆ ಕಂಗಾಲಾಗಿರುವ ರೈತ ಪರಿವಾರ ಸಂಕಷ್ಟಕ್ಕೆಡಾಗಿದೆ….
ಆಕಾಶದತ್ತ ಮುಖ ಮಾಡಿದ ರೈತ : ಮಳೆಯನ್ನೇ ನಂಬಿ ಮಳೆಯ ಶ್ರೀತ ಜಮೀನುಗಳಲ್ಲಿ ಸಜ್ಜೆ ಹಾಗೂ ಮುಸ್ಕಿನ ಜೋಳ ಇನ್ನಿತರ ಫಸಲನ್ನು ರೈತರು ಫಸಲನ್ನು ಹಾಕಿದ್ದು ಸಜ್ಜೆ ಹಾಗೂ ಮುಸ್ಕಿನ ಜೋಳ ಪಸಲು ತೆನೆ ಬಂದು ಕಾಳು ಕಟ್ಟುವ ಸಂದರ್ಭದಲ್ಲಿ ಮಳೆ ಇಲ್ಲದೆ ಒಣಗಿ ನಿಂತಿರುವ ಬೆಳೆಗಳು ಇದರಿಂದಾಗಿ ರೈತ ಮಳೆಗಾಗಿ ಆಕಾಶದತ್ತ ಮುಖ ಮಾಡಿರುವ ರೈತರ ಸಂಕಷ್ಟದಲ್ಲಿ ಸಿಲುಕಿದ್ದಾರೆ….
ಅತ್ತ ನೆರೆ ಇತ್ತ ಬರೇ : ಬಹುತೇಕ ಹನೂರು ತಾಲೂಕು ಗುಡ್ಡಗಾಡು ಪ್ರದೇಶ ಮಳೆಯನ್ನೇ ನಂಬಿ ಬೆಳೆ ಬೆಳೆಯುವ ರೈತರು ಈ ಬಾರಿ ಮುಂಗಾರು ಹಂಗಾಮ ಮಳೆ ಕಡಿಮೆಯಾಗಿರುವುದರಿಂದ ಆಗಿರುವ ಬೆಳೆಗಳು ಮಳೆ ಇಲ್ಲದೆ ಒಣಗುತ್ತಿದ್ದು ಕೈಗೆ ಬಂದ ತುತ್ತು, ಬಾಯಿಗೆ ಬರದಂತೆ ಆಗಿದ್ದು ಸಂಕಷ್ಟದಲ್ಲಿರುವ ರೈತನ ಗೋಳು ಸರ್ಕಾರ ಇತ್ತ ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕಾಗಿದೆ ಅತ್ತ ಮಳೆ ಬಿದ್ದು ಅನಂತರ ಸೃಷ್ಟಿಸಿದರೆ ಇತ್ತ ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಸೇರಿದಂತೆ ವಿವಿಧಡೆ ಮಳೆ ಇಲ್ಲದೆ ಬರಗಾಲದಿಂದ ತತ್ತರಿಸಿರುವ ರೈತರು ಹನಿ ನೀರಿಗಾಗಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ…
