
ಹನೂರು :- ತಾಲೂಕಿನ ಕೌದಳ್ಳಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಕಡಂಬುರು ನಿವಾಸಿ ರೈತ ಮಹದೇವ್ ಅವರನ್ನು 3 7 2025 ರಂದು ಎಲಚಿಕೆರೆ ಅರಣ್ಯ ಪ್ರದೇಶದಲ್ಲಿ ಮೇಕೆಗಳು ಮತ್ತು ಜಾನುವಾರಗಳನ್ನು ಮೇಯಿಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಮನಬಂದಂತೆ ಥಳಿಸಿಕರೆದುಕೊಂಡು ಹೋಗಿ ಕೌದಳ್ಳಿ ಗೆಸ್ಟ್ ಹೌಸ್ ನಲ್ಲಿ ಹಲ್ಲೇ ನಡೆಸಿ ದರ್ಪ ನಡೆಸಿರುವ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಮಪುರ ಪೊಲೀಸ್ ಠಾಣೆಗೆ ರೈತ ಮುಖಂಡರ ಜೊತೆ ತೆರಳಿ ಮಹದೇವ್ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ….
ಘಟನೆಯ ವಿವರ :- ಮಾದೇಶ್ವರ ವನ್ಯಜೀವಿ ವಿಭಾಗದ ಕೌದಳ್ಳಿ ವಲಯ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಮೃತಪಟ್ಟಿರುವ ಬಗ್ಗೆ ಅದರ ಕಾಲು ಉಗುರು ಕತ್ತರಿಸಿರುವ ಪ್ರಕರಣ ಅರಣ್ಯ ಸಚಿವರ ಕೇಂದ್ರ ಕಚೇರಿಗೆ ಸಾರ್ವಜನಿಕರಿಂದ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ 3 5 2025 ರಂದು ಹಿರಿಯ ಅರಣ್ಯಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಘಟನೆಯ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥ ರ ಬಗ್ಗೆ ಹಾಗೂ ಈ ಇದಕ್ಕೆ ಸಂಬಂಧಿಸಿದ ಅರಣ್ಯ ಅಧಿಕಾರಿ ಸಿಬ್ಬಂದಿಗಳ ಲೋಪ ದೋಷಗಳ ಪಟ್ಟಿ ವರದಿಯನ್ನು ನೀಡುವಂತೆ ಆದೇಶಿಸಿದ್ದರು ಈ ಹಿನ್ನೆಲೆಯಲ್ಲಿ ದನಗಾಹಿ ಮಹದೇವ್ ಎಲಿಚಿಕೆರೆ ಅರಣ್ಯ ಪ್ರದೇಶದಲ್ಲಿ ಮೇಕೆಗಳು ಹಾಗೂ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಗಾರ್ಡ್ ಕಲ್ಮೇಶ ಹಾಗೂ ವಾಚಸ್ ಸಿದ್ದಲಿಂಗ ಸೇರಿದಂತೆ ಮತ್ತೊರ್ವ ಸಿಬ್ಬಂದಿ ಅವರ ಹೆಸರು ಗೊತ್ತಿಲ್ಲ ಎಂದು ರಾಮಪುರ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ…

ಅರಣ್ಯ ಇಲಾಖೆ ಸಿಬ್ಬಂದಿಗಳ ದರ್ಪ ಕ್ರಮ ಕೈಗೊಳ್ಳುವಂತೆ ದೂರು :
ಚಿರತೆಯ ಕಾಲು ಕಡಿದು ಉಗುರು ಕತ್ತರಿಸಿಕೊಂಡು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿರುವ ವೇಳೆಯಲ್ಲಿಯೇ ರಾಮಪುರ ವಲಯ ಎಲಚಿಕೆರೆ ಅರಣ್ಯ ಪ್ರದೇಶದಲ್ಲಿ ಧನಗಾಗಿ ಮಹದೇವ ಅವರನ್ನು ಜಾನುವಾರುಗಳು ಮತ್ತೆ ಮೇಕೆಗಳನ್ನು ಓಡಿಸಿ ಮಹದೇವ್ ಅವರನ್ನು ಸಿಬ್ಬಂದಿಗಳು ಕಪಾಲಕ್ಕೆ ಮತ್ತು ಬೆನ್ನಿಗೆ ಥಳಿಸಿಕೌದಳ್ಳಿ ಗ್ರಾಮದಲ್ಲಿರುವ ಅರಣ್ಯ ಇಲಾಖೆ ಗೆಸ್ಟ್ ಹೌಸ್ ಗೆ ಕರೆತಂದು ಮನ ಬಂದಂತೆ ತಳಿಸಿ ದೌರ್ಜನ್ಯ ನಡೆಸಿ ಚಿರತೆಯ ಸಾವಿಗೆ ನೀನೇ ಎಂದು ಒಪ್ಪಿಕೋ ಎಂದು ದರ್ಪದಿಂದ ಹಲ್ಲೇ ನಡೆಸಿ 15000 ಹಣ ನೀಡುವಂತೆ ಒತ್ತಾಯಿಸಿದ್ದು, ಮಧ್ಯರಾತ್ರಿ 12ವರೆಗೆ ಬಟ್ಟೆಯನ್ನು ಬಿಚ್ಚಿ ಧನಗಾಯಿ ರೈತ ಮಹದೇವ್ ಅವರನ್ನು ಹಿರಿಯ ನಾಗರಿಕ ಎಂದು ಸಹ ನೋಡದೆ ಹಲ್ಲೇ ನಡೆಸಿರುವ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ….
ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರು ಚಿರತೆ ಸಾವಿಗೆ ಕಾರಣನಾದ ಅವರನ್ನು ಬಂಧಿಸಿರುವುದಿಲ್ಲ ಹೀಗಾಗಿ ಅಮಾಯಕ ರೈತ ದನಗಾಗಿ ಮಹಾದೇವ್ ಅವರ ಮೇಲೆ ಜಿಲ್ಲೆಯ ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಿನವೇ ಧನಗಾಯಿ ರೈತನ ಮೇಲೆ ದೌರ್ಜನ್ಯ ನಡೆದಿದೆ ಹನೂರು ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಅಧಿಕಾರಿಗಳ ಸಭೆ ಕರೆದು ಅರಣ್ಯದಂಚಿನ ಭಾಗಗಳಲ್ಲಿ ರೈತರ ಜೊತೆ ಸಂಯಮದಿಂದ ಅರಣ್ಯ ಅಧಿಕಾರಿ ಸಿಬ್ಬಂದಿಗಳು ವರ್ತಿಸುವಂತೆ ಸೂಚನೆ ನೀಡಿದ್ದರು ಇಂತಹ ಘಟನೆ ಜರುಗಿದೆ ಹೀಗಾಗಿ ಸಂಬಂಧಪಟ್ಟ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ರೈತ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ…
ಹೊನ್ನೂರ್ ಪ್ರಕಾಶ್ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ..
