
ಜೇವರ್ಗಿ ತಾಲ್ಲೂಕು: ಅಫಜಲಪುರ ತಾಲ್ಲೂಕಿನ ಆರ್‌ಡಿ ಪಾಟೀಲ ಅವರ ಹುಟ್ಟು ಹಬ್ಬದ ಆಚರಣೆಯ ಸಂದರ್ಭದಲ್ಲಿ ಇವರು 2023 ರರ ವಿಧಾನಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿ ಅಫಜಲಪುರ ತಾಲೂಕಿನಲ್ಲಿ ಜನರ ಸೇವೆಗಾಗಿ ಯುವಕರ ಸ್ಪೂರ್ತಿಯಾದ ಕಣ್ಮಣಿ ಯುವ ನಾಯಕ ಅಪಾರ ಯುವಕರ ಮನದಲ್ಲಿ ನೆಲೆಸಿರುವ ಶ್ರೀ ಯುತ್ ಆರ್‌ಡಿ ಪಾಟೀಲ ಅವರ ಹುಟ್ಟು ಹಬ್ಬ ದ ಪ್ರಯುಕ್ತ ಅವರ ಅಭಿಮಾನಿಗಳಿಂದ ಜೇವರ್ಗಿ ತಾಲ್ಲೂಕು ಸರಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಶರಣು ಹಿಪ್ಪರಗಿ ಇವರ ನೇತೃತ್ವದಲ್ಲಿ ಆರ್‌ಡಿ ಪಾಟೀಲರ ಅಭಿಮಾನಿ ಬಳಗದಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲವನ್ನು ಹಂಚಿ ಸಂಭ್ರಮಿಸಲಾಯಿತು.ಹುಟ್ಟು ಹಬ್ಬದ ಪ್ರಯುಕ್ತ ಸಂದರ್ಭದ ಮಾತನಾಡಿ ಹಲವಾರು ಯುವಕರ ಜನ ಮೆಚ್ಚಿದ ಜನನಾಯಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಜನರ ಸೇವೆ ಮಾಡಲೆಂಬ ನಮ್ಮೆಲ್ಲರ ಪ್ರೀತಿ ಪಾತ್ರರಾಗಲು ನಾವು ಆಶಿಸುತ್ತೇವೆ ಇವತಿನ ಶುಭ ಸಂದರ್ಭದ ನಾವು ಎಲ್ಲರೂ ಶುಭ ಕೋರುತ್ತೇನೆ,ಇದೇ ಸಂದರ್ಭದಲ್ಲಿ ಭೀಮರಾಯ ಜನಿವಾರ,ಸಂತೋಷ ಜೈನಾಪು, ಸಾಹೇಬಗೌಡ ಬಿ. ಮಾವನೂರ, ಭೀಮಾಶಂಕರ ಬಿಲ್ಲಾಡ, ಸಿದ್ದಣಗೌಡ ಬಿರೇದಾರ, ನಿಂಗು ಗಜ, ಮಲ್ಲು ಸಜ್ಜನ, ವಿರೇಶ ಅವಂಟಿ, ಶಿವು ಕುನ್ನುರ, ವಿಜಯಕುಮಾರ ಕಲ್ಲೂರ, ನಾಗಶಟ್ಟಿ ಪಾಟೀಲ, ಶರಬುಕಲ್ಯಾಣಿ ನೆಲೋಗಿ, ಸಿದ್ದು ಕಮನಕೇರ,ಶಬ್ಬಿರಪಟೇಲ್ ಸಿರಸಗಿ,ಚೇತನ ನೈಕೋಡಿ,ಮಲ್ಲು ಜೇವರ್ಗಿ, ಮರೇಪ್ಪ ಕೊಳಕೋರ, ಚಂದು ತಳವಾರ,ಹಲವಾರು ಉಪಸ್ಥಿತರಿದ್ದರು.
ವರದಿ:ಲಕ್ಷ್ಮಣ ಎಸ್ ಪವಾರ ಜೇವರ್ಗಿ
