
ಜೇವರ್ಗಿ: ತಾಲ್ಲೂಕಿನ ಹಿಪ್ಪರಗಿ (ಎಸ್ ಎನ್) ತಾಂಡದ ಗ್ರಾಮೀಣ ಭಾಗದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಈ ಶಾಲೆಗೇ ಮೂಲ ಸೌಕರ್ಯ ಕೊರತೆ ಎದುರಿಸುತ್ತಿದೆ.ಈ ತಾಂಡದ ಶಾಲೆಯಲ್ಲಿ ಕನಿಷ್ಠ ಸೌಲಭ್ಯ ಇಲ್ಲದೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಆವರಣದ ಗೋಡೆ ಕುಸಿದಿದೆ’ ಶೌಚಾಲಯಗಳು ಹೆಸರಿಗೆ ಮಾತ್ರ ನಿರ್ಮಿಸಿದಂತಿವೆ.ಆದರೆ ಬಳಕೆಯಾಗುವತ್ತಿಲ್ಲ. ಕೆಲವಡೆ ನೀರಿನ ಸಮಸ್ಯೆಯಿಂದ ಬಂದ್ ಇದ್ದ ಕಾರಣದಿಂದಾಗಿ ಶಾಲಾ ಬಾಲಕ ಬಾಲಕಿಯರು ಬಯಲಿಗೆ ತೆರಳುತ್ತಿರುವುದು ನಿತ್ಯ ತಪ್ಪಿಲ್ಲ.ತಾಂಡದ ಮುಖ್ಯ ರಸ್ತೆ ಯಿಂದ ಶಾಲೆಗೆ ತೆರಳು ಬೇಕಾದರೆ ಸೂಕ್ತ ರಸ್ತೆ ಇಲ್ಲ ಕೆಸರು ಗದ್ದೆಯಂತಾಗಿದೆ ಶಾಲಾ ಮಕ್ಕಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.ಸಾಲಾ ಕೊಟ್ಟಡಿ ಕೂಡ ಶೀತಲಗೊಂಡಿವೆ ಶಾಲಾ ಪಕ್ಕದಲ್ಲಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮ್ ಜೋಡ ಕಂಬಕ್ಕೆ ಸುತ್ತಲೂ ಸೂಕ್ತ ರೀತಿಯ ವ್ಯವಸ್ಥೆ ಇಲ್ಲ ಒಟ್ಟಾರೆ ಅಪಾಯದ ಪರಿಸ್ಥಿತಿಯಲ್ಲಿ ತಲುಪಿದೆ,ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು(SDMC) ಬಾಹಳ ವರ್ಷವಾದರು ರಚನೆಯಾಗದ, ಇರುವುದು ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸರಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಕೈಚೆಲ್ಲಿ ಕುಳಿತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.:
ಶಾಲೆಯ ಮುಖ್ಯ ಶಿಕ್ಷಕರು ಹೇಳಿಕೆ:ನಾವು ಹಲವಾರು ಬಾರಿ ಗ್ರಾಮ ಪಂಚಾಯತಿಗೆ ಎಸ್ ಡಿ ಎಮ್ ಸಿ ರಚನೆಗೆ ನಾವು ಲೇಟರ್ ಕಳಿಸಿದರು ನಮಗೆ ಅನುಮೋದನೆ ನೀಡಿಲ್ಲ, ಮತ್ತು ತಾಲ್ಲೂಕು ಶಿಕ್ಷಣ ಇಲಾಖೆಗೆ ಮನವಿ ಪತ್ರ ಕೂಡ ನೀಡಿದ್ದವೆ ಇಲ್ಲಿ ವರೆಗೆ ಸ್ಪಂದಸದ ಮೇಲಧಿಕಾರಗಳು ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ.ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎಂದು ಹೇಳುವ ಸರಕಾರಿ,ಶಾಲೆಗಳ ಅವ್ಯವಸ್ಥೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಸರಿಯಲ್ಲ. ಹೀಗೆ ಹತ್ತು ಹಲವಾರು ಸಮಸ್ಯೆಗಳಿವೆ. ಗ್ರಾಮೀಣ ಭಾಗದ ಶೈಕ್ಷಣಿಕ ಕ್ಷೇತ್ರ ಹಿಂದುಳಿದಿದೆ. ಎಂದು ಗ್ರಾಮದ ಜನರು ಕರ್ನಾಟಕ ಪೋಲಿಸ್ ನ್ಯೂಸ್ ಸುದ್ದಿ ವಾಹಿನಿಯಲ್ಲಿ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ವಿಠ್ಠಲ ಪವಾರ,ಬದ್ದು ರಾಠೋಡ ಗ್ರಾಮ ಪಂಚಾಯತಿ ಸದಸ್ಯರು, ಅನೀಲ ಪವಾರ, ವಾಸು ರಾಠೋಡ, ಸಂಜು ರಾಠೋಡ,ರಾಜು ರಾಠೋಡ,ದೇವೇಂದ್ರ ಚವ್ಹಾಣ,ಸುಭಾಷ್ ಪವಾರ,ರಾಘು ರಾಠೋಡ,ವಿಜಯಕುಮಾರ ರಾಠೋಡ,ಪ್ರಭು ಪವಾರ, ಉಪಸ್ಥಿತರಿದ್ದರು.
ವರದಿ:ಲಕ್ಷ್ಮಣ ಪವಾರ ಜೇವರ್ಗಿ
