ಅಕ್ರಮ ಗಾಂಜಾ ಸಾಗಾಟ : 01 ಕೆ.ಜಿ, 840 ಗ್ರಾಂ ತೂಕದ ಗಾಂಜಾ ವಶ

ಅಕ್ರಮ ಗಾಂಜಾ ಸಾಗಾಟ : 01 ಕೆ.ಜಿ, 840 ಗ್ರಾಂ ತೂಕದ ಗಾಂಜಾ ವಶ

ಹನೂರು :- ಅಕ್ರಮವಾಗಿ ಮಾರಾಟ ಮಾಡಲು 65 ಸಾವಿರ ಮೌಲ್ಯದ ಒಣಗಾಂಜಾ ಸಾಗಾಟ ಮಾಡುತ್ತಿದ್ದ ಕೂಡ್ಲೂರು ಗ್ರಾಮದ ಮಾಧುರಾಜ್ ಬಿನ್ ಮಾದ ಎಂಬ ವ್ಯಕ್ತಿಯನ್ನು ರಾಮಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಈಶ್ವರ್ ನೇತೃತ್ವದ ತಂಡ ಬಂಧಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದ 01 ಕೆ.ಜಿ, 840 ಗ್ರಾಂ ತೂಕದ ಒಣಗಾಂಜಾ (ಅಂದಾಜು ಮೌಲ್ಯ: 65,000) ವನ್ನು ವಶಪಡಿಸಿಕೊಂಡಿದ್ದಾರೆ.ದಿನಾಂಕ: 13-08-2025 ರಂದು ಮಾಧುರಾಜ್ ಎಂಬ ವ್ಯಕ್ತಿಯು ಕೂಡ್ಲೂರು ಗ್ರಾಮದಿಂದ ಗಾಂಜಾ ಮಾರಾಟ ಮಾಡಲು ಬೈಕ್ ನಲ್ಲಿ ಸಾಗಿಸುತ್ತಿದ್ದಾಗ ಸಂಜೆಯ ವೇಳೆಗೆ ನಾಲ್ ರೋಡ್ ಗ್ರಾಮದ ಹೂಗ್ಯಂ ರಸ್ತೆಯ ಗಡಪಾರೆ ಹಳ್ಳದ ಸೇತುವೆಯ ಬಳಿ ರಾತ್ರಿ 8-30 ಗಂಟೆಯಲ್ಲಿ ಪೋಲಿಸರಿಗೆ ಸಿಕ್ಕಿ ಬಿದ್ದಿದ್ದಾನೆ.ಪೊಲೀಸ್ ಅಧೀಕ್ಷಕರಾದ ಡಾ. ಕವಿತಾ, ಬಿ.ಟಿ, ಐಪಿಎಸ್ ರವರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ.ಶಶಿಧರ್.ಎಂ.ಎನ್. ಕೆ.ಎಸ್.ಪಿ.ಎಸ್ ರವರ ನಿರ್ದೇಶನ ಮೇರೆಗೆ ಡಿವೈಎಸ್ಪಿ ಧರ್ಮೇಂದ್ರ ರವರು ತಿಳಿಸಿದ ಖಚಿತ ಮಾಹಿತಿ ಮತ್ತು ಮಾರ್ಗದರ್ಶನದಲ್ಲಿ ಹಾಗೂ ರಾಮಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬಿ.ಚಿಕ್ಕರಾಜಶೆಟ್ಟಿರವರ ಮಾರ್ಗದರ್ಶನದಂತೆ ಸಬ್ ಇನ್ಸ್ಪೆಕ್ಟರ್ ಈಶ್ವರ್ ನೇತೃತ್ವದಲ್ಲಿ ತಂಡ ದಾಳಿ ಮಾಡಿ ಗಾಂಜಾ ಸಾಗಾಟ ಮಾಡುತ್ತಿದ್ದ ಮಾಧುರಾಜ್ ಎಂಬ ಆರೋಪಿಯನ್ನು ಬಂಧಿಸಿ 01 ಕೆ.ಜಿ 840 ಗ್ರಾಂ ತೂಕದ ಒಣಗಾಂಜಾ (ಅಂದಾಜು ಮೌಲ್ಯ: 65,000) ವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕ ಒಪ್ಪಿಸಲಾಗಿದೆ. ಘಟನೆ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ರಾಜೀವ್ ರವರ ಸಮ್ಮುಖದಲ್ಲಿ ಪರೀಶೀಲನೆ ನಡೆಸಿದರು.ಈ ದಾಳಿಯಲ್ಲಿ ಭಾಗವಹಿಸಿದ್ದ ಪಿಎಸ್‌ಐ ಈಶ್ವರ್, ಎಎಸ್ಐ ತಕೀವುಲ್ಲಾ, ಸಿಬ್ಬಂದಿಗಳಾದ ರವಿಕುಮಾರ್, ಬಿಳಿಗೌಡ, ಶಿವಕುಮಾರ್, ಶೆಹನ್ ಷಾ ಮಕನ್‌ದಾರ್, ಮಹೇಂದ್ರ, ರವರ ತಂಡದ ಕಾರ್ಯಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ. ಕವಿತಾ, ಬಿ.ಟಿ, ಐಪಿಎಸ್ ರವರು ಪ್ರಶಂಸಿಸಿದ್ದಾರೆ.

Related Articles

Leave a Reply

Your email address will not be published. Required fields are marked *