ಓಂ ಶಕ್ತಿ ದೇವಾಲಯದಲ್ಲಿ ಆಡಿ ಮಾಸದ ಪ್ರಯುಕ್ತ ಗಂಜಿಯನ್ನು ಸಮರ್ಪಿಸಿದ ಭಕ್ತಸಮೂಹ 

ಓಂ ಶಕ್ತಿ ದೇವಾಲಯದಲ್ಲಿ ಆಡಿ ಮಾಸದ ಪ್ರಯುಕ್ತ ಗಂಜಿಯನ್ನು ಸಮರ್ಪಿಸಿದ ಭಕ್ತಸಮೂಹ 

ಹನೂರು :- ಪಟ್ಟಣದಲ್ಲಿ ಶ್ರೀ ಓಂ ಶಕ್ತಿ ದೇವಾಲಯದಲ್ಲಿ ದೇವಿಗೆ ಅಲಂಕಾರ ಮಾಡಿ ವಿಶೇಷ  ಪೂಜೆ ಹಾಗೂ ಗಂಜಿಯನ್ನು ಸಮರ್ಪಿಸಲಾಯಿತು. ಓಂ ಶಕ್ತಿ ದೇವಾಲಯದಲ್ಲಿ ಆಡಿ ಮಾಸದ ಪ್ರಯುಕ್ತ ವಿಶೇಷ ಪೂಜೆ ಕಾರ್ಯಗಳನ್ನು ಸಲ್ಲಿಸಿ. ಆಡಿ ಮಾಸದ ಮಂಗಳವಾರದ ವಿಶೇಷವಾಗಿ ಮುಂಜಾನೆ ದೇವಿಗೆ ಪನ್ನೀರು, ಎಳನೀರು, ಅರಿಶಿನ, ಕುಂಕುಮ, ಜೇನುತುಪ್ಪ, ಗಂಧ, ಹಾಲಿನ ಅಭಿಷೇಕವನ್ನುಅರ್ಪಿಸಿ, ವಿಶೇಷ ಪೂಜೆಯನ್ನು ನೆರವಿಸಿದ  ನಂತರ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿ, ವಿಧಿ ವಿಧಾನಗಳ ಮೂಲಕ ಗಂಜಿ ಪ್ರಸಾದಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಪುರೋಹಿತರು ನೆರೆದಿದ್ದ ಭಕ್ತಾದಿಗಳಿಗೆ ಮಡಿಕೆಯಲ್ಲಿ ಗಂಜಿಯನ್ನು ವಿತರಿಸಿದರು.  ಮಹಿಳೆಯರು ಗಂಜಿಯನ್ನು ಮಡಿಕೆಯಲ್ಲಿ ಹೊತ್ತು ದೇವರ ನಾಮ ಹಾಗೂ ನೃತ್ಯ ಮಾಡುವುದು ನೋಡುಗರ ಮನಸಳೆಯಿತು. ವಾದ್ಯ ಮೇಳಗಳ ಜೊತೆಯಲ್ಲಿ ಪ್ರಮುಖ ದೇವಾಲಯಗಳಲ್ಲಿ ಪೂಜೆಯನ್ನು ಸಲ್ಲಿಸಿ, ಓಂ ಶಕ್ತಿ ದೇವಾಲಯಕ್ಕೆ ತಲುಪಿ ಎಲ್ಲಾ ಮಹಿಳೆಯರು ತಂದಿದ್ದ ಮಡಿಕೆಯ ಗಂಜಿಯನ್ನು ಪ್ರಸಾದ ರೂಪದಲ್ಲಿ ಎಲ್ಲರಿಗೂ ವಿತರಿಸಿದರು. ಓಂ ಶಕ್ತಿ ಟ್ರಸ್ಟ್ ರವರು ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ಅನ್ನಸಂತರ್ಪಣೆ  ಏರ್ಪಡಿಸಿದ್ದರು.      ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರು ಸೋಮೇಗೌಡ ಸದಸ್ಯರುಗಳಾದ ವಸಂತಮ್ಮ, ನಾಗಮ್ಮ, ಲಕ್ಷ್ಮಿ, ಶಾಂತಿ, ಕವಿತಾ, ಇಂದ್ರಮ್ಮ, ಶಿಲ್ಪ, ಶಿವಕುಮಾರ್ ,ರಾಘು, ಸಿದ್ದರಾಜು, ಗಂಗಾಧರ್, ವೆಂಕಟೇಶ್ ಸೇರಿದಂತೆ ನೂರಾರು ಭಕ್ತಾದಿಗಳು ನೆರೆದಿದ್ದರು.

Related Articles

Leave a Reply

Your email address will not be published. Required fields are marked *