
ಹನೂರು :- ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಒಬ್ಬರಿಗೆ ಕಾಲು ಮುರಿತ ಗೊಂಡಿರುವ ಘಟನೆ ಸಂಭವಿಸಿದೆ. ಇಂದು ರಾತ್ರಿ ಸರಿ ಸುಮಾರು 7.30 ರಲ್ಲಿ ಮಲ್ಲಯ್ಯನಪುರ ಗ್ರಾಮ ಬಸ್ ನಿಲ್ದಾಣದ ಹತ್ತಿರ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಎರಡು ಬೈಕ್ ಅಪಘಾತ ಸಂಭವಿಸಿ ಕೌದಳ್ಳಿ ಗ್ರಾಮದ ರಾಜು ಎಂಬುವವರಿಗೆ ಕಾಲು ಮುರಿತಗೊಂಡು ಗಂಭೀರ ಗಾಯಗಳಾಗಿದ್ದೆ ಮತ್ತು ಮಾರ್ಟಳ್ಳಿ ಗ್ರಾಮದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಅಲ್ಲಿದ್ದಂತಹ ಸ್ಥಳೀಯರು ಆಂಬುಲೆನ್ಸ್ ಮುಖಾಂತರ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸುದ್ದಿ ತಿಳಿದ ರಾಮಪುರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
