
ಹನೂರು :- ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಗತಾಪುರ ಗ್ರಾಮದ ಮುಸ್ಲಿಂ ಸಮುದಾಯದವರು ಶನಿವಾರದಂದು ಶ್ರದ್ಧಾ, ಭಕ್ತಿಯಿಂದ ಈದ್ ಮಿಲಾದ್ ಆಚರಿಸಿದರು.

ಬೆಳಿಗ್ಗೆ ಮಸೀದಿಯಲ್ಲಿ ಪುರುಷರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಗ್ರಾಮದ ಮಸೀದಿಯಲ್ಲಿ ಮುಸ್ಲಿಮರು ಆಟೊ, ಮೇಲೆ ಮೆಕ್ಕಾ ಮದೀನಾ, ಪ್ರತಿಕೃತಿ ಇರಿಸಿ ಮೆರವಣಿಗೆ ಮಾಡಲಾಯಿತು.

ಈ ಮೆರವಣಿಗೆಯಲ್ಲಿ ನೂರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಚಿಣ್ಣರರಿಂದ ವಯಸ್ಕರವರೆಗೆ ಮೆರವಣಿಗೆಯಲ್ಲಿ ಭಾಗವಹಿಸಿ, ಸಂಗೀತಕ್ಕೆ ಭಕ್ತಿಯಿಂದ ಭಾವದಿಂದ ಹೆಜ್ಜೆಗಳು ಹಾಕಿದರು. ಮೆರವಣಿಗೆಯಲ್ಲಿ ರಾಷ್ಟ್ರಧ್ವಜ, ಹಸಿರು ವರ್ಣದ ಧ್ವಜ, ಹಾಗೂ ಕರ್ನಾಟಕದ ಹಳದಿ ಮತ್ತು ಕೆಂಪು ವರ್ಣದ ದ್ವಜ ಕೂಡ ರಾರಾಜಿಸಿದವು. ಹಾಗೇಯೆ ದೇವರ ಹೆಸರಲ್ಲಿ ಆರಾಧನೆ ಮಾಡುತ್ತಾ, ಮಹ್ಮದ್ ಪೈಗಂಬರ್ ಸಂದೇಶಗಳ ಕುರಿತು ಘೋಷಣೆ ಕೂಗಿದರು.

ಚಿಗತಾಪುರ ಗ್ರಾಮದ ಮಸೀದಿ ಕಡೆಯಿಂದ ಆರಂಭಗೊಂಡ ಮೆರವಣಿಗೆ ಗ್ರಾಮದ ಎಲ್ಲಾ ಬೀದಿ ಬೀದಿಗಳಲ್ಲಿ ತೆರಳಿ ಸಮಾರೋಪ ಆಯಿತು. ನೂರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡು ಹಬ್ಬಕ್ಕೆ ಮೆರಗು ತಂದರು. ಗ್ರಾಮದಲ್ಲಿ ಶಾಂತಿ ಕಾಪಾಡಲು ಹನೂರು ಪೊಲೀಸ್ ಠಾಣೆ ಸಿಬ್ಬಂದಿ ವತಿಯಿಂದ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮತ್ತು ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಸ್ಲಿಂ ಕಮಿಟಿ ಅಧ್ಯಕ್ಷ ರೇಹಮಾನ್, ಸೆಕ್ರೆಟರಿ ಅಮ್ಜದ್ ಖಾನ್, ಸೈಯದ್ ನಜ್ರು, ಅಬ್ದುಲ್ ಆರೀಫ್, ಪತ್ರಕರ್ತ ಶಾರುಕ್ ಖಾನ್, ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ತೌಸಿಪ್ ಅಹಮದ್, ಅಪ್ಸರ್ ಬೇಗ್, ಅಲ್ಲಾಬಕಶ್, ಶಾದಬ್ ಖಾನ್, ಸಲ್ಮಾನ್ ಖಾನ್, ಅಯೂಬ್ ಖಾನ್,ಜೀಯಾಉಲ್ಲಾ, ಸೇರಿ ಮತ್ತಿತರು ಇದ್ದರು.
