ಹಾಲಿನ ಕ್ಯಾನ್‍ನಲ್ಲಿ ಗಾಂಜಾ; ಅಬಕಾರಿ ಅಧಿಕಾರಿಗಳ ದಾಳಿ ಆರೋಪಿಯ ಬಂಧನ…!

ಹಾಲಿನ ಕ್ಯಾನ್‍ನಲ್ಲಿ ಗಾಂಜಾ; ಅಬಕಾರಿ ಅಧಿಕಾರಿಗಳ ದಾಳಿ ಆರೋಪಿಯ ಬಂಧನ…!

ಹನೂರು :- ತಾಲೂಕಿನ ಎಂ.ಟಿ ದೊಡ್ಡಿ ಗ್ರಾಮದ ಜಮೀನಿನ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿದ್ದ ಆರೋಪಿಯನ್ನು ಗುರುವಾರ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ವೆಂಕಟರಮಣಗೌಡ (55) ಬಂಧಿತ ಆರೋಪಿ. ಈತ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ಧೇಶದಿಂದ ಜಮೀನಿನ ಮನೆಯಲ್ಲಿ ಸಂಗ್ರಹಿಸಿದ್ದನು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ದಯಾನಂದ್ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕ ಶ್ರೀಧರ್ ಹಾಗೂ ಸಿಬ್ಬಂದಿಗಳ ತಂಡ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಹಾಲಿನ ಕ್ಯಾನ್‍ನಲ್ಲಿ ಗಾಂಜಾ ಸಂಗ್ರಹಿಸಿರುವುದು ದೃಢಪಟ್ಟಿತ್ತು. 2 ಕೆ.ಜಿ 568 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡ ಅಬಕಾರಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ದಾಳಿಯಲ್ಲಿ ಸಿಬ್ಬಂದಿಗಳಾದ ರಮೇಶ್, ಶಾಂತರಾಜು ಹಾಗೂ ಇನ್ನಿತರರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *