
ಹನೂರು :- ತಾಲ್ಲೂಕಿನ ಸಂದ್ಯಯನ ಪಾಳ್ಯ ಗ್ರಾಮದಲ್ಲಿ ಮಗನೆ ತನ್ನ ತಂದೆಯನ್ನು ಕ್ರೂರವಾಗಿ ಹತ್ಯೆ ಎಸಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಹತ್ಯೆಯಾದವರು ಪಾಕಿಯನಾಥನ್ (55), ಇದೇ ಗ್ರಾಮದ ನಿವಾಸಿಯಾಗಿದ್ದು, ಆರೋಪಿ ಅವರ ಪುತ್ರ ಜಾನ್ಸನ್ ಆಗಿದ್ದಾನೆ.
ಜಾನ್ಸನ್ ಅಪನಂಬಿಕೆಗೆ ಒಳಗಾಗಿ ತನ್ನ ತಂದೆ ಪಾಕಿಯನಾಥನ್ ಅವರೇ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಅನುಮಾನಿಸುತ್ತಿದ್ದ. ಈ ಹಿನ್ನೆಲೆ ಭಾನುವಾರ ರಾತ್ರಿ ತಂದೆ-ಮಗನ ನಡುವೆ ತೀವ್ರ ವಾಗ್ವಾದ ನಡೆಯಿತು ಮಾವಿನ ಮರದ ಕೆಳಗೆ ಕುಳಿತಿದ್ದ ತಂದೆಯನ್ನು ಜಾನ್ಸನ್ ಕಲ್ಲಿನಿಂದ ತೀವ್ರವಾಗಿ ಹಲ್ಲೆ ನೆಡೆಸಿದ ಪರಿಣಾಮವಾಗಿ ಪಾಕಿಯನಾಥನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಆರೋಪಿ ಜಾನ್ಸನ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತು ಮಾಹಿತಿ ತಿಳಿದು ರಾಮಾಪುರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಾಗಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
