ಸ್ನೇಕ್ ಜಬಿರವರಿಂದ ಭಾರಿ ಗಾತ್ರದ ಹೆಬ್ಬಾವು ರಕ್ಷಣೆ….!

ಹನೂರು :- ತಾಲ್ಲೂಕಿನ ಮಿಣ್ಯಂ ಗ್ರಾಮದ ಜಮೀನೊಂದರಲ್ಲಿ ಮುಸುಕಿನ ಜೋಳ ಕಟಾವು ಮಾಡುತ್ತಿದ್ದ ವೇಳೆ ಭಾರಿ ಗಾತ್ರದ ಹೆಬ್ಬಾವು ಗುರುವಾರ ಸಂಜೆ 5.30 ವೇಳೆ ಪತ್ತೆಯಾಗಿದೆ.

ಗ್ರಾಮದ ಕುಮಾರ್ ಎಂಬ ರೈತರ ಜಮೀನಿನಲ್ಲಿ ಕೂಲಿ ಕಾರ್ಮಿಕರು ಮುಸುಕಿನ ಜೋಳ ಕಟಾವಿನಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಹೆಬ್ಬಾವು ನೋಡಿದ ಕಾರ್ಮಿಕರು ತಕ್ಷಣ ಕೆಲಸವನ್ನು ಬಿಟ್ಟು ಓಡಿ ಬಂದಿದ್ದಾರೆ.

ಘಟನೆಯ ಕುರಿತು ಸ್ಥಳೀಯರು ಮಾಹಿತಿ ನೀಡಿದ ಬಳಿಕ ಉರಗ ತಜ್ಞ ಸ್ನೇಕ್ ಜಬಿ ಸ್ಥಳಕ್ಕೆ ಬಂದು 12 ರಿಂದ 13 ಅಡಿ ಉದ್ದದ 15 ಕೆಜಿ ತೂಕವುಳ್ಳ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯ ಇಲಾಖೆಯ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಬೀಡಲಾಯಿತು. ಹಾವಿನ ರಕ್ಷಣೆಯ ನಂತರ ಕಾರ್ಮಿಕರು ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ.

Related Articles

Leave a Reply

Your email address will not be published. Required fields are marked *