
ಹನೂರು :- : ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ಆದೇಶದ ಮೇರೆಗೆ ಹೊಸಳ್ಳಿ ಗ್ರಾಮದ 40 ವರ್ಷ ನಾಗರಾಜ್ ಬಿನ್ ನಾಗಬೋವಿ ಎಂಬುವವರು ಹಸುಗಳನ್ನು ಮೇಯಿಸುತ್ತಿದ್ದಾಗ ನಾಯಿಗಳ ದಾಳಿಗೆ ಜಿಂಕೆ ಬಲಿಯಾಗಿತ್ತು. ಬಲಿಯಾಗಿರುವ ಗಂಡು ಜಿಂಕೆಯ ಮಾಂಸವನ್ನು ಬೇರ್ಪಡಿಸುವ ವೇಳೆ ಆರೋಪಿ ನಾಗರಾಜು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.ಕೌದಳ್ಳಿ ವನ್ಯಜೀವಿ ವಲಯದ ಉತ್ತೇಬಾವಿ ಅರಣ್ಯ ಪ್ರದೇಶದಲ್ಲಿ ಒಂದು ಗಂಡು ಜಿಂಕೆಯನ್ನು ಹತ್ಯಾ ಮಾಡಿರುವ ಬಗ್ಗೆ ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ಉಲ್ಲಂಘನೆ ಸಂಬಂಧ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಲೋಕೇಶ್ ಚವ್ಹಾಣ್, ಉಪ ವಲಯ ಅರಣ್ಯ ಅಧಿಕಾರಿ ಸಮೀರ್ ಭಗವನ್, ಗಸ್ತು ವನಪಾಲಕರಾದ ಮಲ್ಲಿಕಾರ್ಜುನ್, ಶೇಖರಯ್ಯ, ಸದಾಶಿವ, ಶಿವರಾಜ್, ಇನ್ನಿತರರು ಇದ್ದರು.
