ಅಕ್ರಮ ಗಾಂಜಾ ಸಂಗ್ರಹ : ಮಹಿಳೆ ಪರಾರಿ…!

ಅಕ್ರಮ ಗಾಂಜಾ ಸಂಗ್ರಹ : ಮಹಿಳೆ ಪರಾರಿ…!

ಹನೂರು :- ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ಮಹಿಳೆಯೋರ್ವೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾವನ್ನು ಅಬಕಾರಿ ಇಲಾಖೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಬಕಾರಿ ಪೊಲೀಸ್ ಇನ್ಸ್‌ಪೆಕ್ಟರ್ ದಯಾನಂದ್ ನೇತ್ರತ್ವದಲ್ಲಿ ನಡೆದ ಈ ಕಾರ್ಯಾಚರಣೆಯ ವೇಳೆ, ಹೂಗ್ಯಂ ಬಸ್ ನಿಲ್ದಾಣದ ಬಳಿ ಗಸ್ತು ನಡೆಸುತ್ತಿದ್ದ ತಂಡಕ್ಕೆ ಗಾಂಜಾ ಸಂಗ್ರಹದ ಕುರಿತು ಖಚಿತ ಮಾಹಿತಿ ದೊರೆತ ಹಿನ್ನಲೆ ಈ ಮಾಹಿತಿಯ ಮೇರೆಗೆ ಜಲ್ಲಿಪಾಳ್ಯ ಗ್ರಾಮದ 48 ವರ್ಷದ ಕುಂಜಮ್ಮ ಅವರ ಮನೆ ಮೇಲೆ ದಾಳಿ ನಡೆಸಿ, ಶೋಧನೆ ಮಾಡುವ ವೇಳೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ ಸುಮಾರು 212 ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ.

ಈ ವೇಳೆ ಆರೋಪಿತ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾಳೆ. ಅಬಕಾರಿ ಪೊಲೀಸರು ಈಕೆಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸುತ್ತಿದ್ದಾರೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಸಿಬ್ಬಂದಿಗಳಾದ ರಮೇಶ್, ಸುಜನ್ ರಾಜ್, ಜಯಪ್ರಕಾಶ್ ಹಾಗೂ ಮಂಜುಪ್ರಸಾದ್ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *