
ಹನೂರು :- ತಾಲೂಕಿನ ಪಾಲಾರ್ ರಸ್ತೆಯ ಇಂಡಿ ಬಸಪ್ಪನ ದೇವಾಲಯದ ಬಳಿ ಕಾಡಾನೆ ನೀರು ಕುಡಿಯಲು ಬಂದು ಸೊಂಡಿಲು ತೂತಾಗಿ ನೀರು ಕುಡಿಯಲಾಗದೆ ಪರದಾಡಿದ ಘಟನೆ ಮನಕಲಕುವಂತೆ ದೃಶ್ಯ ಕಂಡು ಬಂದಿತ್ತು..ಪಾದಚಾರಿಗಳು ಇದನ್ನು ಕಂಡು, ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ತೂತಾಗಿರುವ ಸೊಂಡಲಿಗೆ ಚಿಕಿತ್ಸೆ ಬೇಕಾಗಿದೆ : ಮನಕಲಕುವ ದೃಶ್ಯವನ್ನು ಕಂಡ ಪಾದಾಚಾರಿಗಳು ನೀರು ಕುಡಿಯಲು ಪರದಾಡುತ್ತಿರುವುದನ್ನು ಮೊಬೈಲ್ ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಅರಣ್ಯ ಅಧಿಕಾರಿಗಳು ಇತ್ತ ಗಮನ ಹರಿಸಿ ತುತಾಗಿರುವ ಸೊಂಡಿಲಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ…
ಪ್ರಾಣಿ ಪ್ರಿಯರ ಆತಂಕ : ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಹಗಲಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳು ನಡು ರಸ್ತೆಯಲ್ಲಿ ನಿಂತು ಪಾದಾಚಾರಿಗಳಿಗೆ ವಾಹನ ಸವಾರರಿಗೆ ಕಂಡುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅರಣ್ಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೊಂಡಿಲು ಗಾಯಗೊಂಡಿರುವ ಆನೆಗೆ ಚಿಕಿತ್ಸೆ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ….
