
ಹನೂರು :- ತಾಲೂಕಿನ ದೊಮ್ಮನ ಗದ್ದೆ ಗ್ರಾಮದ ಒಂದನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ಎಂಬುವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಪೋಷಕರು ಕಡು ಬಡವರಾಗಿರುವುದರಿಂದ ದಾನಿಗಳು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಹನೂರು ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಮ್ಮನಗದ್ದೆ ಗ್ರಾಮದ ಮುರುಗ ಮತ್ತು ಪ್ರಿಯಾಂಕ ಎಂಬುವರ ಪುತ್ರ ಪ್ರಜ್ವಲ್ ದೊಮ್ಮನ ಗದ್ದೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಆದರೆ ವಿದ್ಯಾರ್ಥಿಗೆ ಬ್ಲಡ್ ಕ್ಯಾನ್ಸರ್ ಕಾಣಿಸಿಕೊಂಡಿರುವುದರಿಂದ ಪೋಷಕರು ದಿಕ್ಕು ತೋಚದಂತಾಗಿದ್ದಾರೆ. ಮುರುಗ ಮತ್ತು ಪ್ರಿಯಾಂಕರವರಿಗೆ ಇಬ್ಬರು ಮಕ್ಕಳಿದ್ದು ಪ್ರಜ್ವಲ್ ಮೊದಲನೆಯ ಮಗನಾಗಿದ್ದಾನೆ. ಪ್ರಜ್ವಲ್ ಗೆ ಹಲವಾರು ತಿಂಗಳಿನಿಂದ ಕ್ಯಾನ್ಸರ್ ಕಾಣಿಸಿಕೊಂಡಿರುವುದರಿಂದ ಪೋಷಕರು ಚಿಕಿತ್ಸೆ ಕೊಡಿಸಿದ್ದಾರೆ.ಆದರೆ ಆಪರೇಷನ್ ಮಾಡಿಸಲು ಹೆಚ್ಚು ಹಣ ಬೇಕಿರುವುದರಿಂದ, ಪ್ರಜ್ವಲ್ ತಂದೆ ತಾಯಿ ಕಡು ಬಡವರಾಗಿರುವುದರಿಂದ ದಾನೆಗಳು ಆಪರೇಷನ್ ಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಪ್ರಜ್ವಲ್ ತಂದೆ ಮುರುಗ ಮಾತನಾಡಿ ನಾವು ಕಡು ಬಡವರಾಗಿದ್ದು ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಇಬ್ಬರು ಮಕ್ಕಳಲ್ಲಿ ಹಿರಿಯ ಮಗ ಪ್ರಜ್ವಲ್ ಗೆ ಕ್ಯಾನ್ಸರ್ ಕಾಣಿಸಿಕೊಂಡಿದೆ ಈಗಾಗಲೇ ಚಿಕಿತ್ಸೆ ಕೊಡಿಸುತಿದ್ದೇವೆ. ಇರುವ ಚಿನ್ನ ಹಾಗೂ ಸಂಬಂಧಿಕರಿಂದ ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದೇವೆ ಇನ್ನು ಹೆಚ್ಚಿನ ಚಿಕಿತ್ಸೆಗೆ ಹಣದ ಅವಶ್ಯಕತೆ ಇರುವುದರಿಂದ ದಾನಿಗಳ ಸಹಾಯ ಕೋರಿ ಮನವಿ ಮಾಡಿದ್ದಾರೆ.
ಪ್ರಜ್ವಲ್ ಹಾಗೂ ತಾಯಿ ಪ್ರಿಯಾಂಕರವರ ಹೆಸರಿನಲ್ಲಿ ರಾಮಾಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಜಂಟಿ ಖಾತೆ ತೆರೆಯಲಾಗಿದ್ದು, ಖಾತೆ ಸಂಖ್ಯೆ 44308824080 ಇದಾಗಿದೆ. ಸಹಾಯ ಮಾಡಲು ಇಚ್ಚಿಸುವವರು ಖಾತೆ ಸಂಖ್ಯೆ ಅಥವಾ ಫೋನ್ ಪೇ ಸಂಖ್ಯೆ 8150858595 ಸಂಖ್ಯೆಗೆ ಸಹಾಯ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
