ಶಾರುಕ್ ಖಾನ್ ಚಾಮರಾಜನಗರ ಜಿಲ್ಲಾ ವರದಿಗಾರರು

ನಾಗಮಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿಗೆ : ಬಾಲಕ ಸಾವು….

ಹನೂರು :- ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ನಾಗಮಲೆಗೆ ತೆರಳುತ್ತಿದ್ದ ಬಾಲಕ ಚಿರತೆ ದಾಳಿಗೆ ಬಲಿಯಾಗಿರುವ ದುರ್ಘಟನೆಭಾನುವಾರ ಬೆಳಿಗ್ಗೆ ನಡೆದಿರುವುದು ತಿಳಿದು ಬಂದಿದೆ. ಬೆಂಗಳೂರು ಮೂಲದ ಹರ್ಷಿತ (10)ಮೃತ ಬಾಲಕ. ಘಟನೆ ವಿವರ: ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮಾದಪ್ಪನ ದೇವಾಲಯಕ್ಕೆ ಆಗಮಿಸಿದ್ದ ಬಾಲಕಸಂಬಂಧಿಕರೊಡನೆ ಭಾನುವಾರ ಬೆಳಿಗ್ಗೆ ನಾಗಮಲೆಗೆ ದೇವರ ದರ್ಶನಕ್ಕೆ ತೆರಳುವಾಗ ಬಾಲಕನ ಮೇಲೆ ಎರಗಿರುವಚಿರತೆ ದಾಳಿ ನಡೆಸಿ ಎಳೆದ್ಯೋಯ್ದಿದೆ. ಸುಮಾರು ಅರ್ಥ ತಾಸಿನ ಬಳಿಕ ಬಾಲಕನ ಮೃತ ದೇಹ ಪತ್ತೆಯಾಗಿದ್ದುಬಾಲಕನ ಕತ್ತು ಸೇರಿದಂತೆ ಅಂಗಾಂಗಳು ರಕ್ತ ಸಿಕ್ತವಾಗಿವೆ ಎಂದು ಸ್ಥಳೀಯರಿಂದ ತಿಳಿದು ಬಂದಿದೆ. ವಿಷಯ ತಿಳಿದಅರಣ್ಯ ಇಲಾಖೆ ವಾಚರಗಳು ಸ್ಥಳದಲ್ಲಿ ಇದ್ದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಾಲಕನ ಕುಟುಂಬಸ್ಥರಆಕ್ರಂದನ ಮುಗಿಲು ಮುಟ್ಟುವಂತಾಗಿದೆ. ಸಾವಿಗೆ ಅರಣ್ಯ ಇಲಾಖೆಯವರ ನಿರ್ಲಕ್ಷ್ಯ ಕಾರಣ: ಅರಣ್ಯ ಇಲಾಖೆಯವರು ಭಕ್ತರು ನಾಗಮಲೆಗೆ ತೆರಳಲು ಬೆಳಿಗ್ಗೆ 7 ಗಂಟೆ ಬಳಿಕ ಟಿಕೆಟ್ ನೀಡುತ್ತಿದ್ದರು ಆದರೆ ಭಾನುವಾರ ಆರು ಗಂಟೆಗೆ ಟಿಕೆಟ್ ನೀಡಿರುವುದರಿಂದ ಈ ದುರ್ಘಟನೆಸಂಭವಿಸಿದೆ. ಭಕ್ತಾಧಿಗಳ ರಕ್ಷಣೆಗೆ ಓರ್ವ ಅರಣ್ಯ ಸಿಬ್ಬಂದಿ ಕೂಡ ಜೊತೆಯಲ್ಲಿ ಹೋಗಬೇಕು ಎಂಬ ನಿಯಮಉಲ್ಲಂಘಿಸಿದ್ದಾರೆ. ಈ ಸಾವಿಗೆ ಅರಣ್ಯ ಇಲಾಖೆಯವರೆ ಕಾರಣ ಎಂದು ನಮ್ಮ ಕನ್ನಡಿಗರ ವಿಜಯ ಸೇನೆ ರಾಜ್ಯಸಂಘಟನಾ ಕಾರ್ಯದರ್ಶಿ ಪೊನ್ನಾಚಿ ಸ್ನೇಹಜೀವಿ ರಾಜು ಆರೋಪಿಸಿದ್ದಾರೆ. ಮುಂದುವರೆದ ಚಿರತೆ ದಾಳಿ: ಮಲೆ ಮಹದೇಶ್ವರ ಬೆಟ್ಟ ಕಾನನದಲ್ಲಿ ಚಿರತೆ ದಾಳಿ ಮುಂದುವರೆದಿದ್ದು ಈ ಹಿಂದೆಮಂಡ್ಯ ಮೂಲದ ಪಾದಯಾತ್ರಿ ಯುವಕ ಚಿರತೆ ದಾಳಿಗೆ ಬಲಿಯಾಗಿದ್ದ. ಈ ಘಟನೆ ಮಾಸುವ ಮುನ್ನವೆಕುಟುಂಬಸ್ಥರ ಜೊತೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ತರಚಿದ ಗಾಯಗಳಾಗಿ ಬಾಲಕ ಬದುಕುಳಿದಿದ್ದ. ಇದಾದ ಬಳಿಕ ಭಾನುವಾರ ಮುಂಜಾನೆ ಬಾಲಕ ಚಿರತೆ ದಾಳಿಗೆಬಲಿಯಾಗಿರುವುದು ಭಕ್ತರು ಹಾಗೂ ಸಾರ್ವಜನಿಕರಲ್ಲಿ ಆತಂಕ ತಂದಿದೆ. ನರ ಭಕ್ಷಕ ಚಿರತೆಗಳನ್ನು ಅರಣ್ಯಇಲಾಖೆಯವರು ಸೆರೆ ಹಿಡಿಯದಿದ್ದರೆ ಮುಂದೆ ಇಂತಹ ಘಟನೆಗಳು ಮರುಕಳುಹಿಸುತ್ತಲೆ ಇರುತ್ತವೆ.

153 ದಿನಗಳ ರೈತ ಸಂಘಟನೆ ವತಿಯಿಂದ ನಡೆಯುತ್ತಿದ್ದ ಅಹೋ ರಾತ್ರಿ ಧರಣಿ ಕೊನೆಗೂ ಅಂತ್ಯ….!

ಹನೂರು :- ದಂಟಳ್ಳಿ ಮಾರ್ಗ ಏತ ನೀರಾವರಿ ಯೋಜನೆ ಕಲ್ಪಿಸುವಂತೆ ಕಳೆದ 153 ದಿನಗಳಿಂದ ನಡೆಯುತ್ತಿದ್ದ ರೈತರಅಹೋ ರಾತ್ರಿ ಧರಣಿ ಪ್ರತಿಭಟನೆಯನ್ನು ಶಾಸಕ ಎಂ. ಆರ್ ಮಂಜುನಾಥ್ ರವರು ರೈತರ ಮನವೊಲಿಸಿದ್ದ ಹಿನ್ನೆಲೆಶನಿವಾರ ಪ್ರತಿಭಟನೆಗೆ ಅಂತ್ಯ ನಾಂಧಿ ಹಾಡಲಾಯಿತ್ತು. ತಾಲೂಕಿನ ವಡಕೆಹಳ್ಳ ಗ್ರಾಮದಲ್ಲಿ ದಂಟಳ್ಳಿ ಏತ ನೀರಾವರಿ ಯೋಜನೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯರೈತ ಸಂಘಟನೆ ವತಿಯಿಂದ ನಡೆಯುತ್ತಿದ್ದ ಅಹೋ ರಾತ್ರಿ ಧರಣಿ ಕೊನೆಗೂ ಅಂತ್ಯಗೊಂಡಿದೆ. ಬಳಿಕ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್ ಹನೂರು ವಿಧಾನ ಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದುಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆ. ಜೊತೆಗೆ ರಸ್ತೆಗಳು, ಸೇತುವೆಗಳು, ಹಾಗೂ ನೀರಾವರಿ ಯೋಜನೆಗೆ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಅಲ್ಲದೇ ಕುಡಿಯುವ ನೀರು ಯೋಜನೆ ಸಂಬಂಧಪಟ್ಟಂತೆ ಈಗಾಗಲೇ ರಾಮನ ಗುಡ್ಡ ಕೆರೆಗೆ ನೀರು ತುಂಬಿದ್ದು ಮುಂದುವರೆದ ಭಾಗವಾಗಿ ಅನೇಕ ಹಳ್ಳಿಗಳಿಗೆಹಳ್ಳದಲ್ಲಿ ನೀರು ಹರಿದು ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಸುಮಾರು 490 ಕೋಟಿರೂ ವೆಚ್ಚದಲ್ಲಿ ಉಡುತೊರೆ ಹಳ್ಳ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಲು ಮುಖ್ಯ ಮಂತ್ರಿಗಳುಅನುಮೋದನೆ ನೀಡಿದ್ದಾರೆ.  ಹಾಗಾಗಿ ಆ ಜಲಾಶಯಕ್ಕೆ ಕಾವೇರಿ ನೀರು ಬಂದರೆ ಖಂಡಿತ ಮಾರ್ಟಳ್ಳಿ, ರಾಮಾಪುರ, ಕೌದಳ್ಳಿ ಶೆಟ್ಟಳ್ಳಿ ಕುರಟ್ಟಿಹೊಸೂರು ಭಾಗದ ಜನರಿಗೆ ಹಾಗೂ ರೈತಾಪಿ ವರ್ಗಕ್ಕೆ ಅನುಕೂಲ ಆಗಲಿದೆ. ಈಗಾಗಲೇ ಮಾರ್ಟಳ್ಳಿ ಭಾಗದಲ್ಲಿಇರುವಂತಹ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಸಾಕಷ್ಟು ಯೋಜನೆ ಸಿದ್ದಪಡಿಸಿದ್ದು ಖಂಡಿತ ನಿಮಗೆ ನೀರಾವರಿಸೌಲಭ್ಯ ಒದಗಿಸಿಯೇ ತಿರುತ್ತೇನೆ ಎಂದರು. ಇದೆ ಸಮಯದಲ್ಲಿ ವಡಕ್ಕೆ ಹಳ್ಳ ಫಾಥರ್ ಡಾ ಸಿಲುವೈನಾಥ್,ಬಿದರಲ್ಲಿ ಫಾಥರ್,ಸಿಸ್ಟರ್ಸೇಲ್ವಮೇರಿ,ಸೈಲೆಂದ್ರ,ಸಯ್ಯದ್ ಉಲ್ಲಾ, ಬಸವರಾಜು, ಬೆಟ್ಟಣ್ಣ,ಮಾರ್ತಾಳ್ಳಿ ಘಟಕದ ಅಧ್ಯಕ್ಷ ರಾದ ಅರ್ಪುದರಾಜು,ರಾಜಶೇಖರ್,ಹಾಗೂ ಇನ್ನಿತರ ರೈತ ಮುಖಂಡರುಗಳು ಇದ್ದರು..

ಮದ್ಯದ ಅಂಗಡಿಯನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರ ಆಗ್ರಹ…!

ಹನೂರು : ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವಂತೆ ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ಧರಣಿ71 ನೇ ದಿನಕ್ಕೆ ಕಾಲಿಟ್ಟಿದ್ದು, ನಿರಂತರ ಹೋರಾಟ ಮಾಡುತ್ತಿದ್ದಾರೆ.  ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅದರಲ್ಲೂ ಸಹ ಮಾರ್ಟಳ್ಳಿ ಮುಖ್ಯ ರಸ್ತೆಯಲ್ಲಿಇರುವಂತಹ ಮಧ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ಸ್ಥಳೀಯರು ಹಾಗೂ ಪಾಲಿಮೇಡುಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.  ನಂತರ ಪ್ರತಿಭಟನಾಕಾರರು ಮಾತನಾಡಿ ಮಧ್ಯದ ಅಂಗಡಿಗಳನ್ನ ಬೇರೆ ವರ್ಗಾವಣೆ ಮಾಡದೆ ಕನಿಷ್ಠಮುಖ್ಯರಸ್ತೆಯಿಂದ 100 ಮೀಟರ್ ಅಂತರದಲ್ಲಿ ಒಳಭಾಗಕ್ಕೆ ವರ್ಗಾವಣೆ ಮಾಡಿ ಎಂದು ನಮ್ಮಕೋರಿಕೆಯಾಗಿದೆ.ಜೊತೆಗೆ ರಸ್ತೆಬದಿಯಲ್ಲೇ ಇರುವ ಮಧ್ಯದ ಅಂಗಡಿಗಳಿಂದ ಈಗಾಗಲೇ ಸಾಕಷ್ಟುಅನಾಹುತಗಳನ್ನು ಕಣ್ಣಾರೆ ನೋಡುತ್ತಿದ್ದೇವೆ.ಅನೇಕರೂ ಕುಡಿದು ರಸ್ತೆಯಲ್ಲಿಯೇ ಮಲಗುತ್ತಿದ್ದೂ ಶಾಲಾ ಮಕ್ಕಳಿಗೆತೊಂದರೆ ಉಂಟಾಗುತ್ತದೆ. ಜೊತೆಗೆ ಈಗಾಗಲೇ ಅಪಘಾತವಾಗಿದೆ. ಗಲಾಟೆಯಾಗಿದೆ. ಆದರೂ ಸಹ ಇದುವರೆಗೂಮಧ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡಲು ಕ್ರಮ ವಹಿಸುತ್ತಿಲ್ಲ ಎಂಬುದು ಪ್ರತಿಭಟನ ಕಾರರ ಆರೋಪವಾಗಿದೆ. ಅಪಘಾತ, ಗಲಾಟೆ : ಮಧ್ಯದ ಅಂಗಡಿಗಳ ಸನಿಹವೇ ಸಾಕಷ್ಟು ಪ್ರಮಾಣದಲ್ಲಿ ದಿನನಿತ್ಯ ಒಂದಲ್ಲ ಒಂದುಗಲಾಟೆಗಳು, ಅಪಘಾತಗಳು, ಕೆಲವರಿಂದ ಅಸಭ್ಯ ವರ್ತನೆಗಳು ಒಂದಲ್ಲ ಒಂದು ನಡೆಯುತ್ತಿದ್ದು, ಈ ವಿಷಯವಾಗಿಚಿತ್ರ ಸಹಿತ ಅಧಿಕಾರಿಗಳಿಗೆ ಮನವಿ ಮಾಡಲಿದ್ದು ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳಿಗೆ ಕಡಿವಾಣ ಹಾಕುವಮೂಲಕ ಮಧ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡುವರೆ ಅಧಿಕಾರಿಗಳು ಕಾದು ನೋಡಬೇಕಾಗಿದೆ. ಅಧಿಕಾರಿಗಳಿಗೆ ಮನವಿ : ಮಧ್ಯದ ಅಂಗಡಿ ಸ್ಥಳಾಂತರ ಮಾಡುವಂತೆ ಈಗಾಗಲೇ ಸಂಬಂಧಪಟ್ಟ ಇಲಾಖೆಯಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದು,. ಜಿಲ್ಲಾಧಿಕಾರಿ ಸಹಿತವಾಗಿ ಉಪವಿಭಾಗಾಧಿಕಾರಿ ಸಹಿತವಾಗಿ ವಿಷಯತಿಳಿಸಿದ್ದು, ಅದರಲ್ಲೂ ಹನೂರು ತಾಲೂಕು ದಂಡಾಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿಮನವಿಯನ್ನು ಸ್ವೀಕರಿಸಿದ್ದಾರೆ. ಆದರೆ ಇವರೆಗೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಮುಂದಾದರು ಕ್ರಮಕೈಗೊಳ್ಳುವರೇ ಕಾದು ನೋಡಬೇಕಿದೆ. ಇದೆ ಸಂದರ್ಭದಲ್ಲಿ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ಥಳೀಯ ನಿವಾಸಿಗಳು ಮಹಿಳೆಯರುಉಪಸ್ಥಿತರಿದ್ದರು. ಚಿತ್ರ : ಮದ್ಯದ ಅಂಗಡಿ ಸಮೀಪವೇ ರಸ್ತೆಯಲ್ಲಿ ಕುಡಿದು ಬಿದ್ದಿರುವ ವ್ಯಕ್ತಿ

ವನ್ಯ ಪ್ರಾಣಿ ದಾಳಿಗೆ ಸಾಕು ಪ್ರಾಣಿ ಬಲಿ…!

ಹನೂರು :- ವನ್ಯಪ್ರಾಣಿ ದಾಳಿಗೆ ಹಸುಯೊಂದು ಬಲಿಯಾಗಿರುವ ಘಟನೆ ಕಳ್ಳಿದೊಡ್ಡಿ ಸಮೀಪದಲ್ಲಿ ಜರುಗಿದ್ದು ಶುಕ್ರವಾರತಡವಾಗಿ ಬೆಳಕಿಗೆ ಬಂದಿದೆ.  ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ಳಿದೊಡ್ಡಿ ಗ್ರಾಮದ ಅಂಕಪ್ಪ ಬಿನ್ ಸಣ್ಣನಾಯಕಸೇರಿದ ಹಸು ಎಂದು ಗುರುತಿಸಲಾಗಿದೆ. ಎಂದಿನಂತೆ ಶನಿವಾರ ಕಳ್ಳಿದೊಡ್ಡಿ ಗ್ರಾಮದ ಜಮೀನಿನಲ್ಲಿ ಮೇವುಮೇಯಲು ಹಸು ಬಿಟ್ಟಿದ್ದರು. ಅಂಕಪ್ಪ ಸಾಕಿದ ನಾಟಿ ಹಸಿವಿನ ಹೊರಿಯನ್ನು ಸಂಜೆ ವೇಳೆ ಚಿರತೆ ದಾಳಿ ಮಾಡಿಕೊಂದು ಹಾಕಿದೆ ಎಂದು ರೈತ ಆರೋಪಿಸಿದ್ದಾರೆ. ದಾಳಿಗೆ ಒಳಗಾದ ಹೋರಿಯ ಕತ್ತಿನ ಭಾಗ ಹಿಂಭಾಗದಲ್ಲಿಗಾಯಗೊಂಡಿದ್ದು ರಕ್ತ ಕಲೆ ಹೊಂದಿದೆ. ಇದರ ಬೆಲೆ ಸುಮಾರು 60 ಸಾವಿರಕ್ಕೆ ಬಾಳುತ್ತಿತ್ತು ಇದೀಗ ಹೋರಿಇಲ್ಲವಾಗಿದೆ ಎಂದು ರೈತ ತಮ್ಮ ಅಳಲುನ್ನು ತೋಡಿಕೊಂಡಿದ್ದು, ಇದಕ್ಕೆ ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆಚಿರತೆ, ವನ್ಯಪ್ರಾಣಿಗಳ ದಾಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.  ಈ ಘಟನೆ ಸಂಬಂಧ ಹನೂರು ಕಾವೇರಿ ವನ್ಯಜೀವಿ ಧಾಮ ವಲಯ ಕಳ್ಳಿದೊಡ್ಡಿ ಬೀಟ್ ಅರಣ್ಯ ಇಲಾಖೆ ಸಿಬ್ಬಂದಿಮಲ್ಲಿಕಾರ್ಜುನ, ವಿವೇಕ್ ಅವರು ಭೇಟಿ ನೀಡಿ ಪರಿಶೀಲನೆ ನೆಡೆಸಿದರು. ಬಳಿಕ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿಎಂದು ಸಿಬ್ಬಂದಿಗಳು ನಾಟಿದನದ ಮಾಲೀಕರಿಗೆ ತಿಳಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ

ಗಾಂಜಾ ಮಾರಾಟ, ಮಹಿಳೆ ಬಂಧನ…

ಹನೂರು :- ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ನಾಗಮಲೆಗೆ ತೆರಳುವ ರಸ್ತೆಯಲ್ಲಿ ಶುಕ್ರವಾರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಮ.ಬೆಟ್ಟ ಸಮೀಪದ ಕೀರನಹೊಲ ಗ್ರಾಮದ…

ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯ ಬಂಧನ…!!

ಹನೂರು :- ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ಬೆಳೆದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಮಪುರ ಪೊಲೀಸ್ ಠಾಣೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ತಾಲೂಕಿನ ದೊಮ್ಮನಗದ್ದೆ ಗ್ರಾಮದ ನಾಗರಾಜು…

ಹೂತಿದ್ದ ಮೃತ ದೇಹವನ್ನು ತಹಸೀಲ್ದಾರ್ ಸುಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ….!

ಹನೂರು :- ಪಟ್ಟಣದ 11ನೇ ವಾರ್ಡ್‌ನಲ್ಲಿ 5 ದಿನದ ಹಿಂದೆ ಮೃತರಾದ ಕೃಷ್ಣಗೌಡರ ದೇಹವನ್ನು ಶುಕ್ರವಾರ ತಹಸೀಲ್ದಾರ್ ಕೆ.ಎನ್. ಚೈತ್ರಾ ಅವರ ಸಮ್ಮುಖದಲ್ಲಿ ಸಮಾಧಿಯಿಂದ ಹೊರತೆಗೆದು ಮರಣೋತ್ತರ…

ಪ್ರಿಯಕನ ಜೊತೆ ಸೇರಿ ಗಂಡನನ್ನೇ ಕೊಂದು ಟಾಯ್ಲೆಟ್ ಗುಂಡಿಯಲ್ಲಿ ಹೂತು ಹಾಕಿದ ಪತ್ನಿ…!

ಹನೂರು :- ತನ್ನ ಪ್ರಿಯಕರನ ಜೊತೆ ಸೇರಿ ಟಾಯ್ಲೆಟ್ ಗುಂಡಿಯಲ್ಲಿ ತನ್ನ ಗಂಡನ ಶವವನ್ನು ಹೂತು ಹಾಕಿದ್ದ ಪತ್ನಿ ಹಾಗೂ ಪ್ರಿಯಕರನಿಗೆ ಅಪರ ಜಿಲ್ಲಾ ಮತ್ತು ಸತ್ರ…

ಸ್ನೇಕ್ ಜಬಿರವರಿಂದ ಭಾರಿ ಗಾತ್ರದ ಹೆಬ್ಬಾವು ರಕ್ಷಣೆ….!

ಹನೂರು :- ತಾಲ್ಲೂಕಿನ ಮಿಣ್ಯಂ ಗ್ರಾಮದ ಜಮೀನೊಂದರಲ್ಲಿ ಮುಸುಕಿನ ಜೋಳ ಕಟಾವು ಮಾಡುತ್ತಿದ್ದ ವೇಳೆ ಭಾರಿ ಗಾತ್ರದ ಹೆಬ್ಬಾವು ಗುರುವಾರ ಸಂಜೆ 5.30 ವೇಳೆ ಪತ್ತೆಯಾಗಿದೆ. ಗ್ರಾಮದ…

ಉಡ ಹತ್ಯೆ ಮಾಡಿ ಸಾಗಾಟ ಮಾಡುತ್ತಿದ್ದ -ಇಬ್ಬರ ಬಂಧನ…!

ಚಾಮರಾಜನಗರ :- ಉಡ ಹತ್ಯೆ ಮಾಡಿ ಸಾಗಿಸುತ್ತಿದ್ದಾಗ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಕೊಳ್ಳೇಗಾಲ ತಾಲೂಕಿನ ಅರೇಪಾಳ್ಯ ರಸ್ತೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಕಿರುಗಾವಲು ಹೋಬಳಿಯ ರಾಮನಾಥಮೋಳೆ…