
ಹನೂರು :- ಭಾಗದಲ್ಲಿರುವ ಕೆರೆಗಳಿಗೆ ಕೆಲವೇ ಕಿಲೊ ಮೀಟರ್ ದೂರದಲ್ಲಿರುವ ಕಾವೇರಿ ನದಿಯ ದಡದಿಂದ ನೀರನ್ನು ತಂದು ತುಂಬಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಪುರಾತನ ಕಾಲದಿಂದಲೂ ನಮ್ಮ ಭಾರತ ದೇಶವು ವ್ಯವಸಾಯ ಪ್ರಧಾನವಾದ ದೇಶವಾಗಿದ್ದು, ರೈತರೇ ಈ ದೇಶದ ಜನರ ಬದುಕಿನ ಜೀವನಾಡಿಗಳಾಗಿದ್ದಾರೆ ಎಂದು ಹನೂರು ಘಟಕದ ಅಧ್ಯಕ್ಷರಾದ ಶ್ರೀ ಹರೀಶ್ ರವರು ತಿಳಿಸಿದರು.
ಹನೂರು ಪಟ್ಟಣದ ತಾಲ್ಲೂಕು ಕಛೇರಿಯಲ್ಲಿನ ಮುಂಬಾಗದಲ್ಲಿ ಹಮ್ಮಿಕೊಂಡಿದ ಪ್ರತಿಭಟನೆಯಲ್ಲಿ ಮಾತನಾಡಿದ ಮಣಿಗಾರ್ ಪ್ರಸಾದ್ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಬಂದು ಹಲವು ದಶಕಗಳೇ ಕಳೆದರು ಇನ್ನೂ ಕೂಡ ರೈತನ ಜೀವನ ಕ್ರಮ ಸುಧಾರಿಸಿಲ್ಲ… ಇಂತಹ ಆಧುನಿಕ ಯುಗದಲ್ಲೂ, ಆಧುನಿಕ ವ್ಯವಸಾಯ ಕ್ರಮದಲ್ಲೂ ಕೂಡ ರೈತನ ಪರಿಸ್ಥಿತಿ ಸುಧಾರಿಸಿಲ್ಲವೆಂದರೆ ಅದಕ್ಕೆ ಮೂಲ ಕಾರಣಗಳನ್ನು ನಾವು ಅರಿಯಬೇಕಿದೆ.ವ್ಯವಸಾಯದ ಜೀವನಾಡಿ ನೀರು. ಈ ನೀರು ರೈತನ ಉಸಿರು. ಇಂತಹ ನೀರು ಎಲ್ಲಾ ರೈತರಿಗೂ ಸಿಗಬೇಕಾಗಿದ್ದು ಅನಿವಾರ್ಯ ಇಂದು ನಮ್ಮ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ನಮ್ಮ ಭಾಗದ ವ್ಯವಸಾಯಕ್ಕೆ ಬಹುತೇಕ ಬೋರ್ವೆಲ್ ಗಳೇ ಆಧಾರವಾಗಿದೆ. ಲಕ್ಷಾಂತರ ರೂ ಸಾಲ ಮಾಡಿ ಬೋರ್ ಕೊರೆಸುವ ರೈತನ ಪಾಡು ಹೇಳ ತೀರದಾಗಿದೆ. 600, 700, 800 ಅಡಿಗಳಷ್ಟು ಆಳಕ್ಕೆ ಬೋರ್ ತೆಗೆಸಿದರು ನೀರು ಸಿಗದೇ ರೈತರು ಲಕ್ಷಗಟ್ಟಲೆ ನಷ್ಟ ಅನುಭವಿಸಿ ಅದಕ್ಕಾಗಿ ಸಾಲ ಮಾಡಿ ಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲಾ ಅದ್ಯಕ್ಷರಾದ ಶಿವಪ್ರಕಾಶ್ ಮಾತನಾಡಿ ನಮ್ಮ ಅಕ್ಕ-ಪಕ್ಕದಲ್ಲಿಯೇ ಕಾವೇರಿ ನದಿ,. ಕಬಿನಿ ನದಿ, ಉಡುತೊರೆಹಳ್ಳ ಮುಂತಾದ ನೀರಿನ ಮೂಲಗಳು ಇದ್ದರೂ ಕೂಡ ಅದನ್ನ ಸದ್ವಿನಿಯೋಗ ಮಾಡಿಕೊಟ್ಟು, ರೈತರ ನೀರಿನ ಬವಣೆಯನ್ನು ಅಂತರ್ಜಲ ಹೆಚ್ಚಿಸುವ ಮೂಲಕ ನೀಗಿಸುವಲ್ಲಿ ತಾಲೂಕು ಆಡಳಿತ, ಜಿಲ್ಲಾಡಳಿತ ವಿಫಲವಾಗಿದೆ. ಜೊತೆಗೆ ರಾಜಕೀಯ ಇಚ್ಛಾಶಕ್ತಿಯು ಕೂಡ ಇಲ್ಲದೇ ಇರುವುದು ನಮ್ಮ ಭಾಗದ ಜನರ ದೌರ್ಭಾಗ್ಯವೆನಿಸಿದೆ. ಕೇವಲ ಚುನಾವಣೆ ಸಂದರ್ಭದಲ್ಲಿ ಇಂತಹ ಆಶ್ವಾಸನೆಗಳನ್ನು ಸುಧೀರ್ಘ ಕಾಲದಿಂದಲೂ ಕೂಡ ನೀಡುತ್ತಾ ಬಂದಿರುತ್ತಾರೆ. ಎಲ್ಲಾ ರೈತ ಬಂಧುಗಳಲ್ಲಿ ನಮ್ಮ ಕಿಸಾನ್ ಸಂಘವು ಮಾಡುವ ಮನವಿ ಏನೆಂದರೆ, ನಾವೆಲ್ಲರೂ ಏಕತೆಯಿಂದ ಒಗ್ಗಟ್ಟಾಗಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಅನಿವಾರ್ಯ ಎಂಬಂತಾಗಿದೆ. ಆ ನಿಟ್ಟಿನಲ್ಲಿ ನಮ್ಮ ತಾಲ್ಲೂಕಿನಲ್ಲಿ ಇರುವಂತಹ ಅನೇಕ ಕೆರೆ-ಕಟ್ಟೆ, ಡ್ಯಾಮ್ ಗಳಾದಂತ ಬಂಡಳ್ಳಿ ಡ್ಯಾಮ್ ಹಲಗಪುರ ಡ್ಯಾಮ್ ಉಜ್ಜಿ ಹುಣಸೆ ರಾಮನ ಗುಡ್ಡೆ ಉಡು ತೊರೆ ಜಲಾಶಯ ಹೂಗ್ಯಮ್ ಡ್ಯಾಮ್ ಕೀರೆ ಪಾತಿ ಡ್ಯಾಮ್ ಕುರಟ್ಟಿ ಹೊಸೂರು ಕೆರೆ ಲೊಕ್ಕನಹಳ್ಳಿ ಹೋಬಳಿಯ ಕವಳಿಕಟ್ಟೆ ಡ್ಯಾಮ್ ಪಿ ಜಿ ಪಾಳ್ಯ ದೊಡ್ಡ ಕೆರೆ ಹಾಗೂ ಹುತ್ತೂರು ಬೈಲೂರು ಪಂಚಾಯಿತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ, ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಮತ್ತು ರಾಜಕೀಯ ಪ್ರಮುಖರು ಕೂಡಲೇ ಪ್ರಥಮ ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ನಮ್ಮ ಸುತ್ತಮುತ್ತಲಿನ ನದಿ ಹಳ್ಳಗಳ ನೀರಿನ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವುದರ ಮೂಲಕ ನಮ್ಮ ಬೋರ್ವೆಲ್ ಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸಿದರೆ ನಮ್ಮ ವ್ಯವಸಾಯಕ್ಕೆ ಅಗತ್ಯವಾದ ನೀರನ್ನು ನಾವು ಪಡೆಯಬಹುದಾಗಿದೆ. ಅಲ್ಲಿಯವರೆಗೂ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ನಮ್ಮ ಹಕ್ಕನ್ನು ಪಡೆದುಕೊಳ್ಳೋಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ,ರಾಜ್ಯ ಪ್ರಾಂತ ಅಧ್ಯಕ್ಷರಾದ ಹಾಡ್ಯ ರಮೇಶ್ , ಜಿಲ್ಲಾ ಕೋಶಾದ್ಯಕ್ಷರಾದ ಲಿಂಗರಾಜು , ಲಕ್ಕುರು ನಟರಾಜು,ಚೆಂದ್ರಶೇಖರ್ ,ಮಹೇಶ್ ,ಶಾಂತಮಲ್ಲಪ್ಪ , ರೈತ ಮುಖಂಡರುಗಳಾದ ರಾಮಪುರ ರಾಜೇಂದ್ರ, ಬೋಸ್ಕೊ,ಸಿದ್ದೇಗೌಡ,ಕಾಂಚಳ್ಳಿ ಬಸವರಾಜು, ಬಸವಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು. ಪ್ರತಿಭಟನೆಯನ್ನು ಹನೂರಿನ ಪಟ್ಟಣದ ಮಹದೇಶ್ವರ ಬೆಟ್ಟ ರಸ್ತೆಯ ಪೆಟ್ರೋಲ್ ಬಂಕ್ ಸರ್ಕಲ್ ನಿಂದ ಹೊರಟು ತಹಸಿಲ್ದಾರ್ ಕಚೇರಿ ಮುಂಭಾಗ ಸೇರಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದರ ಮೂಲಕ ತಾಲೂಕು, ಜಿಲ್ಲಾ ಆಡಳಿತಗಳಿಗೆ ಮನವಿ ಮಾಡಿದರು .
