ಕ್ಷೇತ್ರದ ವಿವಿದ ವಾರ್ಡ್ ಗಳ ಸಮಸ್ಯೆಗಳನ್ನು ಆಲಿಸಿದ ಶಾಸಕ ಎಂ.ಆರ್ ಮಂಜುನಾಥ್..

ಕ್ಷೇತ್ರದ ವಿವಿದ ವಾರ್ಡ್ ಗಳ ಸಮಸ್ಯೆಗಳನ್ನು ಆಲಿಸಿದ ಶಾಸಕ ಎಂ.ಆರ್ ಮಂಜುನಾಥ್..

ಹನೂರು :- ಪಟ್ಟಣದ ವಿವಿಧ ವಾರ್ಡ್ ಗಳಿಗೆ ಶಾಸಕ ಎಂಆರ್ ಮಂಜುನಾಥ್ ಬೇಟಿ ನೀಡಿ ಪಟ್ಟಣ ವಾಸಿಗಳ ಸಮಸ್ಯೆ ಆಲಿಸಿಕುಡಿಯುವ ನೀರಿನ ಸಮಸ್ಯೆ ಉಲ್ಬಣ ಆಗದಂತೆ ಮುಂಜಾಗ್ರತ ಕ್ರಮ ವಹಿಸುವಂತೆ ಕಿರಿಯ ಅಭಿಯಂತರಿಗೆ ಸೂಚನೆ ನೀಡಿದರು.ಪಟ್ಟಣ ವಾಟರ್ ಮೇನ್ ಗೆ ತರಾಟೆಗೆ ತೆಗೆದುಕೊಂಡ ಶಾಸಕರು ಪಟ್ಟಣದ ವಿವಿದ ಭಾಗಗಳಿಗೆ ನೀರು ಸರಿಯಾಗಿ ಬರುತ್ತಿಲ್ಲ ಎಂದು ಸಾರ್ವಜನಿಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಆರೋಪ ಮಾಡಿದ ಹಿನ್ನೆಲೆ ಪಟ್ಟಣ ಪಂಚಾಯಿತಿ ವಾಟರ್ ಮೇನ್ ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಈ ರೀತಿಯ ನೀರಿನ ಸಮಸ್ಯೆ ಅದಲ್ಲಿ ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಂದು ಎಚ್ಚರಿಕೆ ನೀಡಿದರು.ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಸಿಸಿರಸ್ತೆ ಚರಂಡಿ ಸೇತುವೆಗಳು ನಿರ್ಮಿಸುವ ಸಂಬಂಧ ಪಟ್ಟಣ ಪಂಚಾಯಿತಿ ಇಂಜಿನಿಯರುಗಳ ಜೊತೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ಆದಷ್ಟು ಬೇಗ ಕೆಲಸ ನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.ದೇವಾಂಗ ಪೇಟೆ ದೇವಾಲಯದ ಮುಂಭಾಗದ ಬೀದಿಯಿಂದ ಜೀವಿಗೌಡ ಕಾಲೇಜ್ ತನಕ ತಡೆಗೋಡೆ ನಿರ್ಮಾನಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ಪಟ್ಟಣ ಜೀವಿಗೌಡ ಕಾಲೇಜ್ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ಯುಜಿಡಿ ನಿರ್ಮಿಸುವ ಸಂಬಂಧ ತಾಲೂಕು ದಂಡಧಿಕಾರಿ ಹಾಗೂ ವಿಎ ಶೇಷಣ್ಣ ರವರ ಜೊತೆ ಸ್ಥಳ ಪರಿಶೀಲನೆ ನಡೆಸಿ ಸ್ಥಳ ನಿಗದಿ ಪಡಿಸಲು ತಿಳಿಸಿದರು.ಇದೇ ಜಿಲ್ಲಾ ನಗರಾಭಿವೃದ್ಧಿ ಕೋಶ ಶಾಖೆ ಇಇ ಅಲ್ತಾಫ್ ತಹಶೀಲ್ದಾರ್ ಗುರುಪ್ರಸಾದ್ ವಿಎ ಶೇಷಣ್ಣ ಪಟ್ಟಣ ಪಂಚಾಯಿತಿ ಕಿರಿಯ ಅಭಿಯಂತರ ನಾಗರಾಜು ಪ್ರಭಾರ ಆರೋಗ್ಯ ನಿರೀಕ್ಷಕ ಪ್ರಕಾಶ್ ಪ. ಪಂ. ಅಧ್ಯಕ್ಷೆ ಮಮ್ತಾಜ್ ಬಾನು ಉಪಾಧ್ಯಕ್ಷ ಆನಂದ್ ಕುಮಾರ್ ಸದಸ್ಯರಾದ ಮಹೇಶ್ ಪವಿತ್ರ ಪ್ರಸನ್ನ ಸಂಪತ್ತು ಮುಖಂಡರಾದ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮಂಜೇಶ್ ಗೌಡ ,ರಾಜೂಗೌಡ, ಗೋವಿಂದ, ಡಿಕೆ ರಾಜು, ವಿಜಯ್ ಕುಮಾರ್, ಶಿವರಾಮು, ಶ್ರೀರಂಗ ಸಿಂಗಾನಲ್ಲೂರು ರಾಜಣ್ಣ, ಚಿನ್ನವೆಂಕಟ್, ಅಮೀನ್, ವೆಂಕಟೇಶ್, ಎಸ್ ಆರ್ ಮಹದೇವ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *