
ಕೊಳ್ಳೇಗಾಲ :- ಅಕ್ರಮವಾಗಿ ಪಡಿತರ ಅಕ್ಕಿಯನ್ನು ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆಯವರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಜರುಗಿದೆ.
ಮಳವಳ್ಳಿ ಟೌನ್ ನಿವಾಸಿಗಳಾದ ಶಿವಕುಮಾರ್ (28) ಬಸವರಾಜು (38) ಬಂಧಿತ ಆರೋಪಿಗಳು. ಸುಮಾರು 25 ಮೂಟೆಯಲ್ಲಿದ್ದ 1112 ಕೆ.ಜಿ ತೂಕದ ಪಡಿತರ ಅಕ್ಕಿ ಹಾಗೂ ಗೂಡ್ಸ್ ವಾಹನವನ್ನು ಜಪ್ತಿ ಮಾಡಿದ್ದಾರೆ.
ಇವರುಗಳು ಪಾಳ್ಯ ಸುತ್ತಮುತ್ತಲು ಜನರಿಂದ ಕಡಿಮೆ ಬೆಲೆಗೆ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಮಳವಳ್ಳಿ ಕಡೆಯ ಕಾಳಸಂತೆಗೆ ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುವುದನ್ನು ಖಚಿತ ಪಡಿಸಿಕೊಂಡ ಫುಡ್ ಇನ್ಸ್‌ಪೆಕ್ಟರ್ ಪ್ರಸಾದ್.ಎನ್.ಎಂ ಹಾಗೂ ಕ್ರೈಂ ಪಿಎಸ್ಐ ಚೆಲುವರಾಜು ಸಿಬ್ಬಂದಿಗಳು ಜಂಟಿಯಾಗಿ ಪಾಳ್ಯ ಗುಂಡೇಗಾಲ ರಸ್ತೆಯಲ್ಲಿ ದಾಳಿ ನಡೆಸಿ ಆರೋಪಿಯನ್ನು ಅಕ್ಕಿ ಮೂಟೆಗಳ ಸಮೇತ ಬಂಧಿಸಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಬಂಧಿತರಿಗೆ ನೋಟೀಸ್ ಜಾರಿ ಮಾಡಿ ಬಿಡುಗಡೆ ಮಾಡಿದರು. ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಮಲ್ಲಿಕಾರ್ಜುನಸ್ವಾಮಿ, ಕಾನ್ಸಟೇಬಲ್ ಗಳಾದ ಮನೋಹರ್, ಮಹದೇವಸ್ವಾಮಿ, ರಾಹುಲ್ ಪೂಜಾರಿ,ಪುಂಡಲೀಕ ಚೌವಣ್ ಇದ್ದರು.
