
ಹನೂರು :- ತಾಲೂಕಿನ ಪೊನ್ನಾಚ್ಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೆರಟ್ಟಿ ಗ್ರಾಮದಲ್ಲಿ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನೊಬ್ಬನಿಗೆ ಕರಡಿಯೊಂದು ಹಿಂಭಾಗದಿಂದ ದಾಳಿ ನಡೆಸಿದ ಪ್ರಸಂಗ ಸೋಮವಾರ ಮುಂಜಾನೆ ನಡೆದಿದೆ.
ಗ್ರಾಮದ ವೀರಪ್ಪ (60) ಎಂಬವರು ಪ್ರತಿದಿನದಂತೆ ತಮ್ಮ ಜಮೀನಿಗೆ ತೆರಳಿ ಕೆಲಸದಲ್ಲಿದ್ದ ವೇಳೆ ಕರಡಿಯೊಂದು ಹಠಾತ್ ಹಿಂಬಾಗದಿಂದ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ಈ ಘಟನೆಯ ನಂತರ ಗಾಯಾಳುವನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಯಿತು. ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
