ಗೂಡ್ಸ್ ಆಟೋ ಹಾಗೂ ಬೈಕ್ ನಡುವೆ ಅಪಘಾತ ಬೈಕ್ ಸವಾರನಿಗೆ ಪೆಟ್ಟು…!

ಗೂಡ್ಸ್ ಆಟೋ ಹಾಗೂ ಬೈಕ್ ನಡುವೆ ಅಪಘಾತ ಬೈಕ್ ಸವಾರನಿಗೆ ಪೆಟ್ಟು…!

ಹನೂರು :- ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿ ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರನಿಗೆ ಪೆಟ್ಟಾಗಿರುವ ಘಟನೆ ಜರುಗಿದೆ.

ಬಿದರಹಳ್ಳಿ ಗ್ರಾಮದ ಚರ್ಚ್ ರಸ್ತೆಯಲ್ಲಿ ತೆರುಳುತ್ತಿದ್ದ ಕೆಎ10 ಎ 8296 ಗೂಡ್ಸ್ ಆಟೋ ಹಾಗೂ ಕೆಎ 10 ಇಇ 8100 ಹೋಂಡಾ ಶೈನ್ ಬೈಕ್ ಮಧ್ಯೆ ಅಪಘಾತವಾಗಿದ್ದು ಈ ವೇಳೆ ಬಿದರಹಳ್ಳಿಯ ಬೈಕ್ ಸವಾರ ಕಾರ್ತಿಕ್ (25) ಎಂಬಾತ ಆಟೋ ಮುಂಭಾಗದ ಗ್ಲಾಸ್ ಗೆ ತಲೆಯಿಂದ ಹೊಡೆದುಕೊಂಡು ಹಣೆಯ ಭಾಗ, ಬಾಯಿ ಕಣ್ಣುಗೆ ಪೆಟ್ಟಾಗಿದೆ. ಕೂಡಲೆ ಸ್ಥಳೀಯರ ನೆರವಿನಿಂದ‌ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ‌ ರವಾನಿಸಲಾಗಿದೆ.

Related Articles

Leave a Reply

Your email address will not be published. Required fields are marked *