
ಜೇವರ್ಗಿ ತಾಲೂಕು: ಸರ್ಕಾರಿ ಕಿರಿಯ ಪ್ರಥಮ ಶಾಲೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಬಿಸಿಯೂಟ ಸೇವಿಸಿ ಸ್ಥಳದಲ್ಲೆ 35 ಕಿಂತ ಹೆಚ್ಚು ಮಕ್ಕಳು ಅಸ್ತವ್ಯಸ್ತಗೊಂಡಿರುವ ಘಟನೆ ಜೇವರ್ಗಿ ತಾಲೂಕಿನ ಮಾರಡಗಿ (ಎಸ್ ಎನ್) ಗ್ರಾಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಅಸ್ವಸ್ಥತೆಗೊಂಡ ಮಕ್ಕಳನ್ನೂ ತಾಲ್ಲೂಕಿನ ಸಾರ್ವಜನಿಕ ಆರೋಗ್ಯ ಕೇಂದ್ರ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.

ಇನ್ನೂ ಈ ಘಟನೆ ತಿಳಿದಂತೆ ಸ್ಥಳಕ್ಕೆ ದೌಡಾಯಿಸಿದ ತಾಲ್ಲೂಕಿನ ದಂಡಾಧಿಕಾರಿಗಳಾದ ಮಲ್ಲಣ್ಣ ಯಲ್ಲಗೂಡ ಅವರ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕೂಡಲೇ ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಯವರು ಬಿಸಿ ಊಟ ಮಾಡುವವರು ವಿರುದ್ಧ ಹಾಗೂ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಬೇಕೆಂದು ರೈತ ಸಂಘಟನೆ ಆಗ್ರಹಿಸಿದ್ದಾರೆ ಒಂದು ವೇಳೆ ಕ್ರಮ ಜರುಗಿಸಿದದ್ದಲ್ಲಿ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಎದುರುಗಡೆ ಪ್ರತಿಭಟನೆ ಮಾಡಲು ಅನಿವಾರ್ಯವಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.
ವರದಿ: ಲಕ್ಷ್ಮಣ ಎಸ್ ಪವಾರ ಜೇವರ್ಗಿ
