ಕಾಡು ಪ್ರಾಣಿಗಳ ಹಾವಳಿ : ಜೋಳದ ಫಸಲು ನಾಶ….!

ಕಾಡು ಪ್ರಾಣಿಗಳ ಹಾವಳಿ : ಜೋಳದ ಫಸಲು ನಾಶ….!

ಹನೂರು :- ತಾಲೂಕಿನ ಮಂಚಾಪುರ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಫಸಲು ಸಂಪೂರ್ಣವಾಗಿ ನಾಶವಾಗಿರುವ ಘಟನೆ ನಡೆದಿದೆ.

ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದ ಮುರುಗನ್ ಎಂಬುವವರಿಗೆ ಸೇರಿದ ಜಮೀನಿನ ಜೊತೆಗೆ, ಅಲಮೇಲು ಮತ್ತು ಬಾಲ ಎಂಬುವವರು ಗುತ್ತಿಗೆಗೆ ಪಡೆದಿದ್ದ ಜಮೀನಿನಲ್ಲಿ ಈ ಹಾನಿ ಸಂಭವಿಸಿದೆ. ಜೋಳದ ಫಸಲು ಉತ್ತಮವಾಗಿ ಕಾಳು ಕಟ್ಟಿ ಸುಮಾರು ಒಂದು ವಾರದೊಳಗೆ ಕಟಾವು ಮಾಡಬೇಕಿತ್ತು. ಆದರೆ ಜೋಳವನ್ನು ಕಾಡು ಪ್ರಾಣಿಗಳು ಹಾಳುಮಾಡಿದ್ದು, ಎಕರೆಗಟ್ಟಲೆ ಬೆಳೆಯು ನಾಶವಾಗಿದೆ. ಕೃಷಿಕರು ಸಾಲಮಾಡಿ ಬಿತ್ತನೆ ಮಾಡಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಘಟನೆ ನಡೆದಿರುವುದು ಆತಂಕಕ್ಕೀಡು ಮಾಡಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದಿಂದ ನೀಡುವ ಪರಿಹಾರವನ್ನು ಶೀಘ್ರವೇ ಕೊಡಿಸುವಂತೆ ರೈತರು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *