
ಹನೂರು :- ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಆಟೋಗಳಲ್ಲಿ ವೀಲಿಂಗ್ ಮಾಡಿ ಹುಚ್ಚಾಟ ಮೆರೆದ ಘಟನೆ ನಡೆದಿದೆ.
ಚಾಮರಾಜನಗರದ ಮೂವರು ಯುವಕರು ಆಟೋ ವೀಲಿಂಗ್ ಮಾಡಿದ್ದುಅಪಘಾತ ವಲಯದಲ್ಲಿ ಅಪಾಯಕಾರಿ ವೀಲಿಂಗ್ ಮಾಡಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಿಕ್ಕಿಬಿದ್ದಿದ್ದಾರೆ.

ವೀಡಿಯೋ ವೈರಲ್ ಬೆನ್ನಲ್ಲೇ ಮೂರು ಆಟೋ ವಶಪಡಿಸಿಕೊಂಡ ಮಲೆಮಹದೇಶ್ವರ ಬೆಟ್ಟ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ. ಚಾಮರಾಜನಗರದ ಯುವಕರ ತಂಡ ಭೀಮನ ಅಮಾವಾಸ್ಯೆ ಪ್ರಯುಕ್ತ ಪ್ಯಾಸೆಂಜರ್ ಆಟೋದಲ್ಲಿ ತೆರಳಿದ್ದಾಗ ಬೆಟ್ಟಕ್ಕೆ ತೆರಳಿದ್ದಾಗ ವೀಲಿಂಗ್ ಮಾಡಿ ಹುಚ್ಚಾಟ ನಡೆಸಿದ್ದಾರೆ.
ಭೀಮನ ಅಮಾವಾಸ್ಯೆ ಪ್ರಯುಕ್ತ ರಾಜ್ಯ ಅಷ್ಟೇ ಅಲ್ಲದೇ ಹೊರರಾಜ್ಯದಿಂದಲೂ ಭಕ್ತ ಸಾಗರವೇ ಬೆಟ್ಟಕ್ಕೆ ಹರಿದುಬಂದಿತ್ತು. ಈ ವೇಳೆ, ಈ ಯುವಕರು ವೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದಾರೆ.
ಕಳೆದ ವಾರವೂ ಚಾಮರಾಜನಗರದ ಬೈಪಾಸ್ ರಸ್ತೆಯಲ್ಲಿ ಯುವಕನೋರ್ವ ಬೈಕ್ ವೀಲಿಂಗ್ ಮಾಡಿ ವೀಡಿಯೋ ಹರಿಬಿಟ್ಟಿದ್ದನು. ವೀಡಿಯೋ ಗಮನಿಸಿ ಚಾಮರಾಜನಗರ ಟ್ರಾಫಿಕ್ ಠಾಣೆ ಪೊಲೀಸರು ಬೈಕ್ ನ್ನು ವಶಕ್ಕೆ ಪಡೆದು ಬಿಸಿ ಮುಟ್ಟಿಸಿದ್ದರು.
