
ಕೊಳ್ಳೇಗಾಲ : ತಾಲ್ಲೂಕಿನ ಚೆಲುವನಹಳ್ಳಿಗ್ರಾಮದ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಚಾಮರಾಜನಗರದ ನಿವಾಸಿಗಳಾದ ಜುಬೇರ್, ಇರ್ಫಾನ್ ಹಾಗೂ ವಾಸೀಂ ಉಲ್ಲಾ ಎಂಬವರನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕಾಳ ಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ಪಡಿತರ ಅಕ್ಕಿಯನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ಕಡೆಗೆ ಕೊಂಡೊಯ್ಯುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಸುಪ್ರೀತ್ ಹಾಗೂ ಆಹಾರ ಇಲಾಖೆ ಶಿರಸಿತ್ತಿದಾರ್ ವಿಶ್ವನಾಥಪ್ರಸಾದ್ ಜಂಟಿ ಕಾರ್ಯ ನಡೆಸಿದ್ದರು.
ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
