
ಹನೂರು :- ತಾಲೂಕಿನ ಮ.ಮ.ಬೆಟ್ಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮಧ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಪೊಲೀಸರು ದಾಳಿ ಮಾಡಿ 28,800 ಮೌಲ್ಯದ 51.840 ಲೀಟರ್ ಮಧ್ಯವನ್ನು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ವಡ್ಡರದೊಡ್ಡಿ ಗ್ರಾಮದ ಎ.ಜೇಮ್ಸ್ ಎಂಬ ವ್ಯಕ್ತಿ ಹಾಗೂ ಐದು ಜನರು ಮ.ಮ. ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಗೂಡು ತಂಬಡಿಗೇರಿ ಕಚ್ಚಾ ರಸ್ತೆಯ ಬಳಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿಗಳು ದಾಳಿ ಮಾಡಿದಾಗ ಅಕ್ರಮ ಮದ್ಯ ಸಾಗಾಟ ಕಂಡುಬಂದಿದೆ.
ಜೇಮ್ಸ್ ಹಾಗೂ ಇತರೆ 5 ಜನರ ಮೇಲೆ ಮ.ಮ.ಬೆಟ್ಟ ಪೊಲೀಸ್ ಠಾಣೆಯು ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.
