
ಹನೂರು :- ಸರ್ಕಾರದಿಂದ ನೀಡುವ ಪಡಿತರವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನವನ್ನು ಹನೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆನಂದಮೂರ್ತಿ ನೇತೃತ್ವದ ತಂಡ ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೊಳ್ಳೇಗಾಲದ ನಿವಾಸಿ ಸೈಯದ್ ನಯೀಮ್ ಎಂಬಾತನೆ ಚಾಲಕರಾಗಿದ್ದು, ಅಕ್ರಮವಾಗಿ ಅಕ್ಕಿ ಸಾಗಣೆ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ಸ್‌ಪೆಕ್ಟರ್ ಆನಂದಮೂರ್ತಿ ಅವರು ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲ ದತ್ತ ಸಾಗುತ್ತಿದ್ದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಹನೂರು ಪಟ್ಟಣ ಬಳಿ ತಪಾಸಣೆ ಮಾಡಿದಾಗ, ವಾಹನದಲ್ಲಿ ಬಿಪಿಎಲ್ ಪಡಿತರ ಅಕ್ಕಿ ತುಂಬಿರೋದು ಬೆಳಕಿಗೆ ಬಂತು. ತಕ್ಷಣವೆ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದು, ಮಾಹಿತಿಯನ್ನು ಹನೂರು ತಾಲ್ಲೂಕು ಆಹಾರ ನಿರೀಕ್ಷಕ ವಿಷ್ಣುಮೂರ್ತಿ ಎವರಿಗೆ ನೀಡಲಾಯಿತು. ಇನ್ಸ್‌ಪೆಕ್ಟರ್ ಆನಂದಮೂರ್ತಿ ಮತ್ತು ಆಹಾರ ನಿರೀಕ್ಷಕ ವಿಷ್ಣುಮೂರ್ತಿ ಪರಿಶೀಲಿದಾದ ಸುಮಾರು ₹48,000 ಮೌಲ್ಯದ ಅಕ್ಕಿ ಸಾಗಣೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ ಈ ವೇಳೆ ಚಾಲಕ ಹಾಗೂ ವಾಹನ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ ಈ ಕಾರ್ಯಚರಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಪೇದೆಗಳಾದ ಚಂದ್ರು ಮತ್ತು ವಿಶ್ವನಾಥ್ ಗೃಹರಕ್ಷಕ ದಳದ ಸಿಬ್ಬಂದಿ ಸಿದ್ದಾರ್ಥ ಹಾಜರಿದ್ದರು
