
ಹನೂರು :- .ಆರ್.ಟಿ ಹುಲಿ ಸಂರಕ್ಷಿತ ಅರಣ್ಯ ವಲಯ ವ್ಯಾಪ್ತಿಗೆ ಸೇರಿದ ಹೊನ್ನೆ ಬಾರೆ ಬೆಟ್ಟದ ಪಕ್ಕದಲ್ಲಿರುವ ಬಯಲು ಅರಣ್ಯ ಪ್ರದೇಶದಲ್ಲಿ ಗಾಂಜಾ ಗಿಡಗಳು ಬೆಳೆದಿರುವುದನ್ನು ಪತ್ತೆಹಚ್ಚಿದ ಅಬಕಾರಿ ನಿರೀಕ್ಷಕ ಅಧಿಕಾರಿಗಳು ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಹನೂರು ತಾಲೂಕಿನ ಬೂದಿ ಪಡೆಗ ಗ್ರಾಮದ ಆಜುಬಾಜಿನಲ್ಲಿ ಗಸ್ತು ಕಾರ್ಯ ನಡೆಸುತ್ತಿದ್ದಾಗ ಕೌಳಿಹಳ್ಳ ಕಟ್ಟೆ ಡ್ಯಾಮ್ ಹತ್ತಿರದ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿದ ಕಾಡಿನಲ್ಲಿ ಗಾಂಜಾ ಗಿಡಗಳು ಬೆಳೆಸಿರುವುದಾಗಿ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ದೊರೆತಿದೆ.ಬಿ.ಆರ್.ಟಿ ಹುಲಿ ಸಂರಕ್ಷಿತ ಅರಣ್ಯ ವಲಯ ವ್ಯಾಪ್ತಿಗೆ ಸೇರಿದ ಹೊನ್ನೆ ಬಾರೆ ಬೆಟ್ಟದ ಪಕ್ಕದಲ್ಲಿರುವ ಬಯಲು ಅರಣ್ಯ ಪ್ರದೇಶದಲ್ಲಿ ಶೋಧನೆ ನಡೆಸಿದಾಗ 36 ಹಸಿ ಗಾಂಜಾ ಗಿಡಗಳು ಬೆಳೆದಿರುವುದನ್ನು ಕಂಡು ಬಂದಿದೆ. ನಂತರ ಪರೀಶೀಲನೆ ನಡೆಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ವಿವೇಕ್ ಅಬಕಾರಿ ಅಧೀಕ್ಷಕರು ಅಬಕಾರಿ ಜಂಟಿ ಆಯುಕ್ತರ ಕಚೇರಿ, ಮೈಸೂರು ವಿಭಾಗ ಮೈಸೂರು ಮತ್ತು ಇವರ ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲ ವಲಯದ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
