ನೀರು ನಿರ್ವಹಣೆ ಇಲ್ಲದೆ ಒಣಗುತ್ತಿರುವ ಗಿಡಗಳು : ಅರಣ್ಯ ಅಧಿಕಾರಿಗಳ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನ : ಲಕ್ಷಾಂತರ ರು ವ್ಯರ್ಥ

ನೀರು ನಿರ್ವಹಣೆ ಇಲ್ಲದೆ ಒಣಗುತ್ತಿರುವ ಗಿಡಗಳು : ಅರಣ್ಯ ಅಧಿಕಾರಿಗಳ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನ : ಲಕ್ಷಾಂತರ ರು ವ್ಯರ್ಥ

ಕೊಳ್ಳೇಗಾಲ :- ಲಕ್ಷಾಂತರ ರೂ. ಖರ್ಚು ವೆಚ್ಚದಲ್ಲಿ ನೆಟ್ಟಿರುವ ಗಿಡಗಳಿಗೆ ನೀರು ಹಾಕಿ ನಿರ್ವಹಣೆ ಇಲ್ಲದೆ. ಬಿರು ಬಿಸಿಲಿನ ತಾಪಕ್ಕೆ ನೀರಿಲ್ಲದೆ ಸಾವಿರಾರು ಗಿಡಗಳು ಒಣಗಿ ಹೋಗುವ ಹಂತಕ್ಕೆ ತಲುಪಿರುವುದು ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿ ಕರ್ತವ್ಯದ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.

ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ಮುಖ್ಯ ಗೇಟ್ ರಸ್ತೆಯ ಬದಿಯ ಎಡಗಡೆ ಬಲಗಡೆ ಇರುವ ಅರಣ್ಯ ಇಲಾಖೆ ವ್ಯಾಪ್ತಿಯ ಖಾಲಿ ಜಾಗದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ನೀರನ್ನು ಹಾಕಿ ಪೋಷಿಸದೆ. ಬಿರು ಬಿಸಿಲಿನಲ್ಲಿ ಒಣಗಿ ನೆಲಕಚ್ಚಿರುವುದು ಕಂಡು ಬಂದಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ.

ಭರಚುಕ್ಕಿ ಫಾಲ್ಸ್ ಮೇನ್ ಗೇಟ್ ರಸ್ತೆಯ ಎರಡು ಬದಿಯಲ್ಲಿ ಹಾಗೂ ವಾಹನಗಳ ಪಾರ್ಕಿಂಗ್ ಸ್ಥಳಗಳು ವೀಕ್ಷಣೆ ಗೋಪುರದ ಜಾಗಗಳಲ್ಲಿ ಸೇರಿದಂತೆ ಇಲ್ಲಿನ ವ್ಯಾಪ್ತಿಯಲ್ಲಿ ಸಾವಿರಾರು ಗಿಡಗಳನ್ನು ನೆಡಲಾಗಿದ್ದು ನೀರಿಲ್ಲದೆ ಒಣಗಿ ನೆಲಕಚ್ಚಿರುವುದು ಕಂಡು ಬರುತ್ತದೆ. ಇದರ ಬಗ್ಗೆ ಪರಿಸರ ಪ್ರೇಮಿಗಳು ಪ್ರವಾಸಿಗರು ಅರಣ್ಯ ಇಲಾಖೆಯವರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.ಕಳೆದ ಇಪ್ಪತ್ತು ದಿನಗಳ ಹಿಂದೆಯಷ್ಟೇ ಅರಣ್ಯ ಇಲಾಖೆಯ ಅಧಿಕಾರಿಗಳು ಲಕ್ಷಾಂತರ ರೂ. ಖರ್ಚು ಮಾಡಿ ಜೆಸಿಬಿ ಯಂತ್ರ ಮೂಲಕ ಗುಂಡಿ ತೆಗೆದು ಗಿಡಗಳನ್ನು ನೆಡಲಾಗಿದೆ. ಗಿಡಗಳನ್ನು ನೆಡುವುದರಲ್ಲೇ ಕೈತೊಳೆದುಕೊಂಡ ಅಧಿಕಾರಿ ಸಿಬ್ಬಂದಿಗಳು ನೆಟ್ಟಿರುವ ಗಿಡಗಳಿಗೆ ದಿನನಿತ್ಯ ನೀರು ಹಾಕಿ ಪೋಷಿಸಿ ಬೆಳೆಸಿ ನಿರ್ವಹಣೆ ಮಾಡುವ ಬದಲು ಗಿಡಗಳನ್ನು ನೆಡುವುದನ್ನೇ ಏನೋ ಸಾಧನೆ ಮಾಡಿದಂತೆ ಬಿಂಬಿಸಿದ್ದಾರೆ. ಗಿಡಗಳ ಪೋಷಣೆ ಕೇಂದ್ರ (ನರ್ಸರಿ) ಸಣ್ಣ ಗಿಡಗಳನ್ನು ಬೆಳೆಸಲು ಅಲ್ಲಿನ ಕೂಲಿಗಾರರು ಮೂರ್ನಾಲ್ಕು ತಿಂಗಳುಗಳ ಕಾಲದ ಸಮಯದಲ್ಲಿ ಬೆಳೆಸಿ ಪೋಷಿಸಿದ ಗಿಡಗಳನ್ನು ತಂದು ನೆಟ್ಟು ನೀರಿಲ್ಲದೆ ಒಣಗಿದೆ ಎಂದರೆ ಗಿಡಗಳನ್ನು ಕಷ್ಟಪಟ್ಟು ಬೆಳೆಸಿದ್ದಾದರೂ ಏತಕ್ಕಾಗಿ. ಇಲ್ಲಿ ಅರಣ್ಯ ಇಲಾಖೆಯ ಲಕ್ಷಾಂತರ ರೂ. ಖರ್ಚು ಮಾಡಿರುವುದು ವ್ಯರ್ಥವಾಗಿದೆ.ಗಿಡ ನೆಟ್ಟು ಬೆಳೆಸಿ ಅರಣ್ಯ ಸಂರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಸಂರಕ್ಷಣೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಇವರಬೇಜವಾಬ್ದಾರಿತನಕ್ಕೆ ಇನ್ನು ಅರಣ್ಯ ಪ್ರದೇಶದ ಒಳಗಡೆ ಇನ್ನೆಷ್ಟು ಗಿಡಗಳನ್ನು ನೆಟ್ಟಿ ಬೆಳೆಸುತ್ತಾರೊ ಇಲ್ಲವೋ ಎಂಬ ಪ್ರಶ್ನೆ ಮೂಡುತ್ತದೆ. ಇನ್ನಾದರೂ ಮುಂದಿನ ದಿನಗಳಲ್ಲಿ ನೆಡುವಂತ ಗಿಡಗಳನ್ನು ಪೋಷಿಸುವ ಕೆಲಸ ಮಾಡಬೇಕಿದೆ.

Related Articles

Leave a Reply

Your email address will not be published. Required fields are marked *