ಚಿಲ್ಲರೆ ಅಂಗಡಿಯಲ್ಲಿ ಕಳವು : ಆರೋಪಿ ಸೆರೆ…!

ಚಿಲ್ಲರೆ ಅಂಗಡಿಯಲ್ಲಿ ಕಳವು : ಆರೋಪಿ ಸೆರೆ…!

ಹನೂರು :- ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ರಸ್ತೆಯಲ್ಲಿನ ಚಿಲ್ಲರೆ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಹನೂರು ತಾಲೂಕಿನ ಬಸಪ್ಪನ ದೊಡ್ಡಿ ಗ್ರಾಮದ ಅಫ್ಜಲ್ ಬಾಬು ( 50) ಬಂಧಿತ ಆರೋಪಿಯಾಗಿದ್ದಾನೆ.

ಘಟನೆ ವಿವರ :- ಹನೂರು ಪಟ್ಟಣದ ನಿವಾಸಿ ಸಂತೋಷ್ ಎಂಬವರು ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನ ಮುಖ್ಯರಸ್ತೆಯಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ಹಲವಾರು ವರ್ಷಗಳಿಂದ ಜೀವನ ನಡೆಸುತ್ತಿದ್ದರು. ಜೂನ್ 27ರ ತಡರಾತ್ರಿ ಕಳ್ಳನೂರ್ವ ಅಂಗಡಿಯ ಹಿಂಬದಿಯಿಂದ ಕಟಿಂಗ್ ಪ್ಲೇಯರ್ ನಿಂದ ಶೀಟ್ ಕಟ್ ಮಾಡಿ ಅಂಗಡಿ ಒಳಗೆ ನುಗ್ಗಿ 15 ಸಾವಿರ ನಗದು , ವಿವಿಧ ಕಂಪನಿಯ ಸಿಗರೇಟ್, ಡ್ರೈ ಫ್ರೂಟ್ಸ್, ಲವಂಗ, ಕಾಳಮೆಣಸುಗಳನ್ನು ಕದ್ದು ಪರಾರಿಯಾಗಿದ್ದನು.ಈ ಸಂಬಂಧ ಅಂಗಡಿಯ ಮಾಲೀಕ ಸಂತೋಷ್ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹನೂರು ಇನ್ಸ್ಪೆಕ್ಟರ್ ಆನಂದಮೂರ್ತಿ.ಸಿ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಪಿಎಸ್ಐ ರವಿ ಹಾಗೂ ಸಿಬ್ಬಂದಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಬಸಪ್ಪನ ದೊಡ್ಡಿ ಗ್ರಾಮದ ಅಫ್ಜಲ್ ಬಾಬು ಎಂಬಾತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ವಿಚಾರಣೆಯ ವೇಳೆ ಅಂಗಡಿಯಲ್ಲಿ ಕದ್ದಿದ್ದ ಪದಾರ್ಥಗಳನ್ನು ತನ್ನ ಮನೆಯಲ್ಲಿ ಇಟ್ಟಿರುವುದಾಗಿ ಮಾಹಿತಿ ನೀಡಿದ್ದ ನಂತರ ಕಳ್ಳತನ ಮಾಡಿದ್ದ ನಗದು ಹಾಗೂ ವಿವಿಧ ಸಾಮಗ್ರಿಗಳನ್ನ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಚರಣೆಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್, ಪೇದೆಗಳಾದ ಚಂದ್ರು, ವಿಶ್ವ, ನಾಗೇಂದ್ರ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *