
ಹನೂರು :- ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ಸರಬರಾಜು ನಿಗಮ ನಿಯಮಿತ ವತಿಯಿಂದಚಾಮುಂಡೇಶ್ವರಿ ಅಮ್ಮನವರ ಜನ್ಮದಿನವನ್ನುಆಚರಿಸಿದರು..ಪಟ್ಟಣ ಚೆಸ್ಕಂ ಹಾಗೂ ಗುತ್ತಿಗೆದಾರರ ವತಿಯಿಂದ ಕಛೇರಿ ಆವರಣದಲ್ಲಿ ಶಾಮಿಯಾನ ಹಾಕಿಸಿ ಚಾಮುಂಡೇಶ್ವರಿ ಅಮ್ಮನವರ ಭಾವಚಿತ್ರ ಇಟ್ಟು ವಿವಿಧ ಬಗೆಯ ಪುಷ್ಪ ಅಲಂಕಾರವನ್ನು ಮಾಡಿ ವಿಶೇಷ ಪೂಜೆಯನ್ನು ನೇರವೇರಿಸಿದರು. ಬಳಿಕ ಮಹಾಮಂಗಳಾರತಿ ಮಾಡಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು..ವಿಜೃಂಭಣೆಯ ಮೆರವಣಿಗೆ : ಪಟ್ಟಣದ ಚೆಸ್ಕಂ ನೌಕರರ ಮತ್ತು ಗುತ್ತಿಗೆದಾರರು ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ತೆರದ ವಾಹನದಲ್ಲಿ ಚಾಮುಂಡೇಶ್ವರಿ ಭಾವಚಿತ್ರವಿಟ್ಟು ವಿವಿಧ ಹೂವುಗಳಿಂದ ಅಲಂಕರಿಸಿ ಕಛೇರಿ ಆವರಣದಿಂದ ಹೂರಟು ಅಂಬೇಡ್ಕರ್ ವೃತ್ತ, ಖಾಸಗಿ ಬಸ್ ನಿಲ್ದಾಣ ಹಾಗೂ ಪ್ರಮುಖ ಸ್ಥಳಗಳಲ್ಲಿ ಮೆರವಣಿಗೆ ಮಾಡಲಾಯಿತು..ಅಲ್ಲದೆ ನೌಕರರು ತಮಟೆ ಸದ್ದಿಗೆ ಮಾರಿಕುಣಿತ ಹಾಕಿ ಸಾಗಿದರು.ಇದೇ ವೇಳೆ ಎಇಇ ರಂಗಸ್ವಾಮಿ, ಇಲಾಖೆ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರ ಹಾಜರಿದ್ದರು..
