
ಚಾಮರಾಜನಗರ :- ತಾಲೂಕಿನ ಸಾಗಡೆ ಮತ್ತು ತಮ್ಮಡಹಳ್ಳಿ ಗ್ರಾಮಗಳ ನಡುವಿನ ರಸ್ತೆಯ ಬದಿಯಲ್ಲಿ ಹೆಣ್ಣು ಹಸುಗೂಸನ್ನು ಪೋಷಕರು ಬಿಟ್ಟು ಹೋಗಿದ್ದು, ಸಾಗಡೆ ಗ್ರಾಮದ ಪರಮೇಶ್ ಎಂಬುವವರು ಅದೇ ರಸ್ತೆಯಲ್ಲಿ ನಗರ ಕಡೆ ಸಂಚಾರ ಮಾಡುತ್ತಿದ್ದಾಗ ಹಸುಗೂಸು ಅಳುವ ಶಬ್ದ ಕೇಳಿ ಬಂದಿದೆ. ತಕ್ಷಣ ಅಲ್ಲಿ ಹೋಗಿ ನೋಡಿದಾಗ ಒಂದು ವಾರದ ಹಿಂದೆ ಜನಿಸಿರುವ ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಕಂಡು ಬಂದಿದೆ.
ಸ್ಥಳಕ್ಕೆ ಬಂದು ನೋಡಿದಾಗ ಹೆಣ್ಣು ಮಗುವನ್ನು ರಸ್ತೆ ಬದಿಯಲ್ಲಿ ಬಿಟ್ಟಿರುವುದು ತಿಳಿದು, ಬಳಿಕ ಸಾಗಡೆ ಗ್ರಾಮದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಮಗುವನ್ನು ಆಂಬುಲೆನ್ಸ್ ಮೂಲಕ ಚಾ.ನಗರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಮಗುವಿನ ಪೋಷಕರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ.
